ಬುದ್ಧಿವಂತಿಕೆಯಿಂದ್ಲೇ ದೇಶ-ವಿದೇಶದ ಗಮನ ಸೆಳೆದ 4ರ ಬೆಂಗ್ಳೂರು ಪೋರ

ಬೆಂಗಳೂರು: ನಗರದ ನಾಲ್ಕು ವರ್ಷದ ಪೋರನೊಬ್ಬ ತನ್ನ ಬುದ್ಧಿವಂತಿಕೆಯಿಂದಲೇ ದೇಶ-ವಿದೇಶದ ಗಮನ ಸೆಳೆಯುತ್ತಿದ್ದಾನೆ. ಈ ಪುಟಾಣಿಯ ಚಿನಕುರಳಿ ಮಾತು, ಬುದ್ಧಿಶಕ್ತಿಯಿಂದಲೇ ದೇಶ -ವಿದೇಶಗಳಲ್ಲಿ ಕೀರ್ತಿ ಪಡೆಯುತ್ತಿದ್ದಾನೆ. ಬೆಂಗಳೂರಿನ ನಾಗರ ಬಾವಿಯ ಶಿವ ಹಾಗೂ ರೀಚೇಶ್ವರಿಯವರ ಮುದ್ದು ಮಗ ರಿಷಿ ಶಿವ ಪಿ. ಎಲ್ಲರನ್ನು ಸೆಳೆಯುತ್ತಿದ್ದಾನೆ.

ನಾಲ್ಕು ವರ್ಷದ ರಿಷಿ ದೇಶ-ವಿದೇಶಗಳ ಹೆಸರನ್ನು ಒಂದೇ ಉಸಿರಿನಲ್ಲಿ ಹೇಳುತ್ತಾನೆ. ರಿಷಿಯ ಐಕ್ಯೂ ಲೆವಲ್ 180 ದಾಟಿದ್ದು, ಅತ್ಯಂತ ಬುದ್ಧಿವಂತ ಮಗು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ. ಐದು ವರ್ಷದ ಒಳಗಿನ ಮೆನ್ಸ್ ಇಂಟರ್ ನ್ಯಾಷನಲ್ ಸದಸ್ಯತ್ವ ಪಡೆದ ಭಾರತದ ಮೊದಲ ಮಗುವಾಗಿದ್ದಾನೆ. ಸರಿಯಾಗಿ ಮಾತನಾಡೋದಕ್ಕೆ ಬರದ ವಯಸ್ಸಿನಲ್ಲಿ ಸುಶ್ರಾವ್ಯವಾಗಿ ಹಾಡುತ್ತಾನೆ. ದೇಶ-ವಿದೇಶಗಳ ಹೆಸರುಗಳನ್ನು ಪಟಪಟನೆ ಹೇಳುವ ಜೊತೆಗೆ ತಾನೇ ಒಂದು ವಿಷಯವನ್ನು ತೆಗೆದುಕೊಂಡು ಪಾಠ ಮಾಡುತ್ತಾನೆ.

ಟರ್ನಿಂಗ್ ಪಾಯಿಂಟ್ ಬಸವನಗುಡಿಯ ತಜ್ಞರು ತಮ್ಮ ವರದಿಯಲ್ಲಿ ರಿಷಿ ಐಕ್ಯೂ 180 ಎಂದು ಹೇಳಿದ್ದಾರೆ. ಶಾಲೆಯಲ್ಲಿ ಈತನ ಜಾಣತನವನ್ನು ನೋಡಿದ ಸಿಬ್ಬಂದಿ ಐಕ್ಯೂ ಪರೀಕ್ಷೆ ಮಾಡಿಸುವಂತೆ ಸಲಹೆ ನೀಡಿದ್ದರು. ಅವರ ಸಲಹೆಯಂತೆ ಚೆಕ್ ಮಾಡಿದಾಗ ಐಕ್ಯೂ 180 ಬಂದಿದೆ. ರಿಪೋರ್ಟ್ ಬಳಿಕ ಮೆನ್ಸಾ ಮೆಂಬರ್ ಶಿಪ್ ಅರ್ಜಿ ಸಲ್ಲಿಸಿದಾಗ ಎಲ್ಲ ದಾಖಲೆಯನ್ನು ಸಂಗ್ರಹಿಸಿ ರಿಷಿಗೆ ಸದಸ್ಯತ್ವವನ್ನು ನೀಡಿದೆ. ಸೆಪ್ಟೆಂಬರ್ ನಲ್ಲಿ ನಡೆಯುವ ಮೆನ್ಸಾ ಕಾನ್ಫರೆನ್ಸ್ ಭಾಗವಹಿಸಲು ಇಂಗ್ಲೆಂಡ್ ಗೆ ಹೋಗುತ್ತಿದ್ದೇವೆ ಎಂದು ರಿಷಿ ತಂದೆ ಪ್ರಸನ್ನ ಕುಮಾರ್ ಹೇಳಿದ್ದಾರೆ.

ಕೋಡಿಂಗ್ ಹಾಗೂ ವಿವಿಧ ಗೇಮ್ ಗಳನ್ನು ಆಡುತ್ತಾನೆ. ಸೆಪ್ಟೆಂಬರ್ ನಲ್ಲಿ ಲಂಡನ್ ರೀಡಿಂಗ್ ಸಿಟಿಯಲ್ಲಿ ನಡೆಯುವ ಮೆನ್ಸಾ ಇಂಟರ್ ನ್ಯಾಷನಲ್ ಆನ್ಯುವಲ್ ಗ್ಯಾದೆರಿಂಗ್ ನಲ್ಲಿ ರಿಷಿ ಭಾರತವನ್ನು ಪ್ರತಿನಿಧಿಸಲಿದ್ದಾನೆ.

Comments

Leave a Reply

Your email address will not be published. Required fields are marked *