ರಾತ್ರೋರಾತ್ರಿ ಆಟೋ ಓಡಿಸಿದ ನಟ ಜಗ್ಗೇಶ್

-ತಂದೆ ನೆನಪಿಸಿಕೊಂಡು ಭಾವನಾತ್ಮಕ ಪೋಸ್ಟ್

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುತ್ತಾರೆ. ಇದೀಗ ಜಗ್ಗೇಶ್ ರಾತೋರಾತ್ರಿ ಆಟೋ ಓಡಿಸಿ ಅಚ್ಚರಿ ಮೂಡಿಸಿದ್ದು, ಆ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.

ನಟ ಜಗ್ಗೇಶ್ ಆಟೋ ಓಡಿಸಿರುವ ವಿಡಿಯೋ ಹಂಚಿಕೊಂಡಿದ್ದು, ತಮ್ಮ ಹಳೆಯ ನೆನಪುಗಳನ್ನು ನೆನಸಿಕೊಂಡಿದ್ದಾರೆ. ‘ಇಂದು ರಾತ್ರಿ ನಾನು ಆಟೋರಾಜ ಆದಾಗ’ ಎಂದು ಟೈಟಲ್ ಕೊಟ್ಟು, “1979-80ರಲ್ಲಿ ಅಪ್ಪ ನನಗೆ ನಿನ್ನ ಅನ್ನ ನೀನೆ ದುಡಿದು ತಿನ್ನು ಆಗ ಬದುಕಿನ ಅರ್ಥ ನಿನಗಾಗುವುದು ಎಂದಿದ್ದರು. ಅಂದು ನನಗೆ ಮೈಯೂರ ಚಿತ್ರದ #interval ದೃಶ್ಯದ ರಾಜಣ್ಣ ನಂತೆ ಶಪಥಮಾಡಿ ಮನೆಬಿಟ್ಟು ಹೋಗಿ ಮೈಸೂರಿನಲ್ಲಿ ಆಟೋ ಡ್ರೈವರ್ ಆಗಿದ್ದೆ. ಆಗ ನನಗೆ ಇದ್ದ ಆಸೆ ಒಂದೇ ಜೀವನದಲ್ಲಿ ಒಂದು ಆಟೋ ಸ್ವಂತ ಪಡೆದು, ದಿನ 100ರೂ ದುಡಿಯುವ ಮನುಷ್ಯನಾಗಿ ಅಪಮಾನಿಸಿದ ಅಪ್ಪನ ಮುಂದೆ ಮೀಸೆ ತಿರುವಿ ಬದುಕಬೇಕು” ಎಂದು ಬರೆದಿದ್ದಾರೆ.

ಬುದ್ಧಿ ಹೇಳುವ ಅಪ್ಪ ಅಂದು ಶತೃವಂತೆ ಕಂಡ:
ಬದುಕಿಗೆ ಬುದ್ಧಿ ಹೇಳುವ ಅಪ್ಪ ಅಂದು ಶತೃವಂತೆ ಕಂಡ. ಇಂದು ಆಕಸ್ಮಿಕವಾಗಿ ಒಬ್ಬ ಆಟೋರಿಕ್ಷಾ ಸಹೋದರ ಸಿಕ್ಕಾಗ ಅವನ ಅನುಮತಿ ಪಡೆದು ಆಟೋ ಓಡಿಸಿದೆ. ಅಪ್ಪ ಹಾಗೂ ನನ್ನ ಮನಸ್ತಾಪದ ದಿನಗಳು ನೆನಪಾದವು. ಅಪ್ಪ ಎಂಥ ಶ್ರೇಷ್ಠ. ಮಗ ನಾನು ಎಂಥ ಅಧಮ. ವ್ಯತ್ಯಾಸ ನನ್ನ ತಲೆತಗ್ಗಿಸುವಂತೆ ನಾಚಿಕೆಯಾಯಿತು. ಮಗ ಬದುಕು ಕಲಿಯಲಿ ಎಂದು ಅಪ್ಪ ಆಡಿದ ಮಾತೆಲ್ಲಾ ಅಣಕ ಅಪಮಾನದಂತೆ ಕೇಳುತ್ತಿತ್ತು ರಕ್ತ ಬಿಸಿಯಿದ್ದಾಗ. ಅದರೆ ಈಗ? ನೀವು ಬೈದು ಬುದ್ಧಿ ಹೇಳುತ್ತಿದ್ದ ಮಗ ಇಂದು ತಾತನಾಗಿ ಬದುಕಿನ ಪುಟಗಳ ಮೆಲುಕು ಹಾಕಿದಾಗ ಅಪ್ಪ ಎಂಥ ಶ್ರೇಷ್ಠ ಮನುಜ ಅನ್ನಿಸಿತು.

ತಂದೆ-ತಾಯಿ ನಡೆದಾಡುವ ದೇವರು: 
ತಪ್ಪಾಯಿತು ಕ್ಷಮಿಸಿ ಅಂದರು ಕೇಳದಷ್ಟು ದೂರದ ಊರಿಗೆ ಹೋಗಿಬಿಟ್ಟೆ. ಕ್ಷಮೆ ಕೇಳಲು ನಾನು ನೀನಿರುವ ಜಾಗಕ್ಕೆ ಬರಬೇಕು. ಇನ್ನು ಅನೇಕ ಕಾರ್ಯವಿದೆ ಮುಗಿಸಿ ಮಾಗಿದಾಗ ದೇಹ ನಿನ್ನಲ್ಲಿಗೆ ಬರುವೆ. ಆಗಲಾದರು ಕ್ಷಮಿಸು ಎಷ್ಟೇ ಆದರು ನಾನು ನಿನ್ನ ಮಗನಲ್ಲವೆ. ಒಂದಂತು ನಿನಗೆ ಸಮಾಧಾನ ಆಗುತ್ತದೆ. ಅಪ್ಪ ನಾನು ಶ್ರಮಿಸಿ ನಿನ್ನ ವಂಶದ ಹೆಸರು ಉಳಿಸಿರುವೆ. ನೀನು ಅಮ್ಮ ಗರ್ವಪಡುತ್ತೀರಿ ನನ್ನ ಸಾಧನೆಕಂಡು love you pa..ever loving son ನಿಮ್ಮ ಈಶ. ತಂದೆ-ತಾಯಿ ನಡೆದಾಡುವ ದೇವರು ಬದುಕಿದ್ದಾಗಲೆ ಗೌರವಿಸಿ. ಕಳೆದುಕೊಂಡ ಮೇಲೆ ಪರಿತಪಿಸಿದರು ಮತ್ತೆ ಸಿಗರು ಎಂದು ತಮ್ಮ ತಂದೆ ನೆನಪಿಸಿಕೊಂಡು ಭಾವನಾತ್ಮಕವಾಗಿ ಬರೆದಿದ್ದಾರೆ.

https://www.instagram.com/p/BxS068Fjzp0/

Comments

Leave a Reply

Your email address will not be published. Required fields are marked *