ಅಪಘಾತದಲ್ಲಿ ಗಾಯಗೊಂಡಿದ ಯುವಕನನ್ನ ತಮ್ಮ ಕಾರಿನಲ್ಲಿಯೇ ಆಸ್ಪತ್ರೆಗೆ ದಾಖಲಿಸಿದ ಎಸ್‍ಪಿ

ಹಾವೇರಿ: ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಿದ್ದ ಯುವಕನನ್ನು ಹಾವೇರಿ ಎಸ್‍ಪಿ ಕೆ ಪರಶುರಾಮ್ ತಮ್ಮ ಕಾರಿನಲ್ಲಿಯೇ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ತೋರಿದ್ದಾರೆ.

ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಾಯಗೊಂಡಿದ್ದರು. ಈ ಸಮಯದಲ್ಲಿ ಅದೇ ಮಾರ್ಗವಾಗಿ ಮನೆಗೆ ತೆರಳುತ್ತಿದ್ದ ಎಸ್‍ಪಿ ಕೆ ಪರಶುರಾಮ ಅವರು ತಮ್ಮ ಕಾರಿನಲ್ಲಿ ಗಾಯಾಳುವನ್ನು ಹತ್ತಿಸಿಕೊಂಡು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.

ಹಾವೇರಿ ನಗರದ ಹೊರವಲಯದ ಸಿಂಧಗಿ ಶಾಂತವೀರೇಶ್ವರ ಆರ್ಯುವೇದ ವೈದ್ಯಕೀಯ ಕಾಲೇಜ್ ಬಳಿ ಅಘಾತ ಸಂಭವಿದೆ. ಗಾಯಾಳು ಸವಣೂರ ತಾಲೂಕು ಹಳೆಹಲಸೂರ ಗ್ರಾಮದ ನಿವಾಸಿ ವಿಜಯಕುಮಾರ ಆಡೂರ ಎನ್ನಲಾಗಿದೆ. ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *