ರಾಬರ್ಟ್ ಜೊತೆ ಐಶ್ವರ್ಯಾ ರೈ ಬರ್ತಾರಾ – ದರ್ಶನ್ ಮೊದಲ ಪ್ರತಿಕ್ರಿಯೆ

ಬೆಂಗಳೂರು: ಇಂದು ಬನಶಂಕರಿ ದೇವಸ್ಥಾನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆದಿದೆ.

ಇದೇ ವೇಳೆ ಮಾಧ್ಯಮದ ಜೊತೆ ಮಾತನಾಡಿದ ದರ್ಶನ್, ಇವತ್ತಿನಿಂದ ನನ್ನ ಕೆಲಸವನ್ನ ಶುರು ಮಾಡುತ್ತಿದ್ದೇನೆ. ಅನ್ನದಾತರು ಅನ್ನ ಕೊಡುತ್ತಿದ್ದಾರೆ. ಹೊಟ್ಟೆ ಪಾಡಿಗೆ ಎನೋ ಮಾಡಬೇಕು ಅಲ್ಲವಾ. ಹೀಗಾಗಿ ಇವತ್ತಿನಿಂದಲೇ ಚಿತ್ರೀಕರಣ ಶುರು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

‘ಚೌಕ’ ಸಿನಿಮಾದಲ್ಲಿ ರಾಬರ್ಟ್ ಆಗಿ ನೋಡಿದೀರಾ. ಅದು ಬಿಟ್ಟು ಬೇರೆ ರೀತಿಯಲ್ಲೆ ಈ ಸಿನಿಮಾ ಇರುತ್ತದೆ. ಗಡ್ಡ ಬಿಟ್ಟಿದ್ದೀನಿ, ಆದರೆ ಅಸಲಿ ಬೇರೆ ಲುಕ್ ಇರುತ್ತದೆ. ರಾಮ ಅಥವಾ ರಾವಣ ಆಗಿರುತ್ತೇನಾ ಅನ್ನೋದು ಇನ್ನೊಂದು ವರ್ಷದಲ್ಲಿ ನಿಮ್ಮ ಮುಂದೆ ಬಂದಾಗ ಗೊತ್ತಾಗುತ್ತದೆ ಎಂದರು.

ನಿರ್ದೇಶಕರು ಇವತ್ತಿನಿಂದ ಅನ್ನ ಸೇವಿಸದಂತೆ ಹೇಳಿದ್ದಾರೆ. ನಿರ್ಮಾಪಕರಿಗೆ ತೊಂದರೆಯಾಗಬಾರದು ಎಂದು ಬೇಗ ಬೇಗ ಸಿನಿಮಾ ಶೂಟಿಂಗ್ ಮುಗಿಸುತ್ತೇವೆ. ನೀವು ಏನೇನು ಅಂದುಕೊಂಡಿದ್ದೀರೋ ಅದಕ್ಕೆ ಬೇರೆಯಾಗಿರುತ್ತದೆ. ನಮ್ಮ ಸಿನಿಮಾಗೆ ಐಶ್ವರ್ಯ ರೈ ಬರುತ್ತಿಲ್ಲ ಎಂದು ಸಿನಿಮಾಗೆ ಐಶ್ವರ್ಯ ಬರುತ್ತಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ.

ಮಂಡ್ಯ ಚುನಾವಣಾ ಫಲಿತಾಂಶದ ಬಗ್ಗೆ ಕೇಳಿದ್ದಕ್ಕೆ, ಈಗ ಬೇಡ ಮಾತನಾಡುವುದು ಅಂತ ದರ್ಶನ್ ಹೇಳಿದ್ದಾರೆ. ನಿರ್ದೇಶಕ ತರುಣ್ ಸುದೀರ್ ನಿರ್ದೇಶನದಲ್ಲಿ ‘ರಾಬರ್ಟ್’ ಚಿತ್ರ ಮೂಡಿ ಬರುತ್ತಿದ್ದು, ಉಮಾಪತಿ ನಿರ್ಮಾಣ ಮಾಡುತ್ತಿದ್ದಾರೆ. ಮಂಗಳವಾರದಿಂದ ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗುತ್ತಿದೆ.

Comments

Leave a Reply

Your email address will not be published. Required fields are marked *