ಚೆನ್ನೈ: ಶನಿವಾರ ಕಾಲಿವುಡ್ ನಟಿ ತ್ರಿಷಾ ಕೃಷ್ಣನ್ 36ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ನಟಿ ಚಾರ್ಮಿ ಕೌರ್ ನನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದ್ದು, ಇದಕ್ಕೆ ತ್ರಿಷಾ ಒಪ್ಪಿಗೆ ನೀಡಿದ್ದಾರೆ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತ್ರಿಷಾ ತನ್ನನ್ನು ಚುಂಬಿಸುತ್ತಿರುವ ಫೋಟೋವನ್ನು ಹಾಕಿ, “ಬೇಬಿ ಐ ಲವ್ ಯೂ ಟುಡೇ, ಫರೆವರ್. ನನ್ನ ಮೊಣಕಾಲ ಮೇಲೆ ಕುಳಿತು ನಿನ್ನ ಸಮ್ಮತಿಯನ್ನು ನಿರೀಕ್ಷೆ ಮಾಡುತ್ತೇನೆ. ನಾವು ಮದುವೆಯಾಗೋಣವೇ? ಈಗ ಕಾನೂನಿನಲ್ಲಿ ಅವಕಾಶ ಇದೆ” ಎಂದು ಹ್ಯಾಪಿ ಬರ್ತ್ಡೇ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.
Baby I love u today n forever 😘
Am on my knees waiting for u to accept my proposal 💍 let’s get married😛😛 ( now toh it’s legally allowed also 😛 ) #happybirthday @trishtrashers 😘😘😘😘 pic.twitter.com/e2F3Zn3Dp3— Charmme Kaur (@Charmmeofficial) May 4, 2019
ಈ ಟ್ವೀಟ್ ಗೆ ತ್ರಿಷಾ “ಧನ್ಯವಾದಗಳು, ನಾನು ನಿನಗೆ ಈಗಾಗಲೇ ಓಕೆ ಹೇಳಿದ್ದೇನೆ” ಎಂದು ಪ್ರತಿಕ್ರಿಯಿಸಿದ್ದಾರೆ. ಚಾರ್ಮಿ 2015, 2017ರಲ್ಲೂ ಈ ರೀತಿಯ ಟ್ವೀಟ್ ಮಾಡಿದ್ದರು.
ಚಾರ್ಮಿ ಕಳೆದ ಕೆಲವು ವರ್ಷಗಳಿಂದ ನಟನೆಯಿಂದ ಹಿಂದೆ ಸರಿದಿದ್ದಾರೆ. 2015ರಲ್ಲಿ ಮಂತ್ರ, ಜ್ಯೋತಿಲಕ್ಷ್ಮಿ ಸಿನಿಮಾಗಳಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದ ಚಾರ್ಮಿ ನಂತರ ನಿರ್ಮಾಪಕಿಯಾಗಿ ಬದಲಾಗಿದ್ದಾರೆ. ರೋಗ್, ಪೈಸಾ ವಸೂಲ್, ಮೆಹಬೂಬಾ ಚಿತ್ರಗಳನ್ನು ನಿರ್ಮಿಸಿದ ಸದ್ಯಕ್ಕೆ ಇಸ್ಮಾರ್ಟ್ ಶಂಕರ್, ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
https://twitter.com/trishtrashers/status/1124646755117613057

Leave a Reply