ಪತ್ನಿಗೆ ಕೈಕೊಟ್ಟು ಗೆಳತಿ ಜೊತೆ ಸಂಸಾರ – ಸರ್ಕಾರಿ ಅಧಿಕಾರಿಗೆ ಬಿತ್ತು ಗೂಸಾ

ಬೆಂಗಳೂರು: ಪತ್ನಿಗೆ ಕೈಕೊಟ್ಟು ಮತ್ತೊಬ್ಬಾಕೆ ಜೊತೆ ಸಂಸಾರ ಮಾಡುತ್ತಿದ್ದ ಪತಿಗೆ ಪತ್ನಿ ಹಾಗೂ ಅವರ ಕಡೆಯವರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಎಂಎಸ್ ಬಿಲ್ಡಿಂಗ್‍ನ ಡಿಪಿಎಆರ್ ನ ಸೀನಿಯರ್ ಪ್ರೋಗ್ರಾಮರ್ ಶಿವಕುಮಾರ್ ತಳವಾರ್(48) ಪತ್ನಿಯಿಂದ ಹಿಗ್ಗಾಮುಗ್ಗಾ ಹೊಡೆಸಿಕೊಂಡಿದ್ದಾನೆ. ಕಾವಲ್‍ಭೈರಸಂದ್ರದಲ್ಲಿ ಎರಡನೇ ಪತ್ನಿ ಜೊತೆಗೆ ವಾಸವಾಗಿದ್ದ ಶಿವಕುಮಾರ್‍ನ್ನು ರೆಡ್‍ಹ್ಯಾಂಡಾಗಿ ಹಿಡಿದ ಪತ್ನಿ ವಿಣಾ ಕಡೆಯವರು ಪಾಠ ಕಲಿಸಿದ್ದಾರೆ. ತಳವಾರ್ ಗೆ ಇಬ್ಬರು ಮಕ್ಕಳಿದ್ದರೂ ಪರಸ್ತ್ರೀ ವ್ಯಾಮೋಹ ಮಾತ್ರ ಬಿಟ್ಟಿಲ್ಲ. ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಎರಡನೇ ಮದ್ವೆಯಾಗಿದ್ದು, ಒಂದು ಮಗು ಕೂಡ ಇದೆ.

ಶಿವಕುಮಾರ್ ಕಳೆದ ಎರಡು ವರ್ಷಗಳಿಂದ ಯುವತಿ ರಂಜಿತಾ ಜೊತೆಗೆ ಆಕ್ರಮ ಸಂಬಂಧವಿಟ್ಟುಕೊಂಡಿದ್ದ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಅವರಿಬ್ಬರ ಫೋಟೋ ಸಮೇತ ನ್ಯಾಯಾಲಯಕ್ಕೆ ಪತ್ನಿ ಮೊರೆ ಹೋಗಿದ್ದಾಗ, ಕೋರ್ಟ್ ಸಹ ವಿಚ್ಛೇದನ ಆಗುವವರೆಗೂ ಮದುವೆ ಆಗಬಾರದು ಅಂತ ಆದೇಶ ನೀಡಿತ್ತು. ಆದರೆ ಕೋರ್ಟ್ ಆದೇಶವನ್ನೂ ಮೀರಿ ಆತ ಮದುವೆಯಾಗಿ ಮಗುವನ್ನೂ ಕೂಡ ಮಾಡಿಕೊಂಡಿದ್ದಾನೆ. ಶಿವಕುಮಾರ್ ಯಾವ ರೀತಿಯ ಆಸಾಮಿ ಅಂತ ಆತನ 6ನೇ ತರಗತಿಯಲ್ಲಿ ಓದುತ್ತಿರುವ ಮಗಳೇ ತನ್ನ ತಂದೆಯ ವಿಕೃತಿ ಬಗ್ಗೆ ಅಳುತ್ತಾ ಹೇಳಿದ್ದಾಳೆ.

ಪತ್ನಿ, ಇಬ್ಬರು ಮಕ್ಕಳು, ಸರ್ಕಾರಿ ಉದ್ಯೋಗ ಇದ್ದರೂ ಚಪಲ ಚನ್ನಿಗರಾಯ ಮಾತ್ರ ಮದುವೆ ಮೇಲೆ ಮದುವೆ ಮಾಡಿಕೊಳ್ಳುತ್ತಿದ್ದಾನೆ. ಇಂತವರಿಗೆ ಶಿಕ್ಷೆ ಆಗಬೇಕು ಎಂದು ಸ್ವತಃ ಶಿವಕುಮಾರ್‍ನ ಮಕ್ಕಳೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *