ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಕ್ರಿಕೆಟ್ ಆಟಗಾರ ವೆಸ್ಟ್ ಇಂಡೀಸಿನ ಕೀರನ್ ಪೊಲಾರ್ಡ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಬ್ಯಾಟಿಂಗ್ ವೇಳೆ ಭಾರೀ ಹೊಡೆತಗಳನ್ನು ಸಿಡಿಸಿ ಖ್ಯಾತಿ ಪಡೆದಿರುವ ಪೊಲಾರ್ಡ್, ಕೇವಲ ಬ್ಯಾಟಿಂಗ್ ಮಾತ್ರವಲ್ಲದೇ ಫೀಲ್ಡಿಂಗ್, ಬೌಲಿಂಗ್ ನಲ್ಲೂ ಮಿಂಚುತ್ತಿದ್ದಾರೆ. ಈ ಬಾರಿಯ ಟೂರ್ನಿಯಲ್ಲೂ ಪೋಲಾರ್ಡ್ ಫೀಲ್ಡಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಆರಂಭಿಕ ಚೆನ್ನೈ ಪಂದ್ಯದ ವೇಳೆ ಸುರೇಶ್ ರೈನಾ ನೀಡಿದ್ದ ಕ್ಯಾಚನ್ನು ಒಂದೇ ಕೈಯಲ್ಲಿ ಹಿಡಿದಿದ್ದರು. ಆದರೆ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬೌಂಡರಿಯತ್ತ ಸಾಗುತ್ತಿದ್ದ ಚೆಂಡು ಹಿಡಿಯಲು ಹೋಗಿ ಅಪಾಯದಿಂದ ಪಾರಾಗಿದ್ದಾರೆ.
https://twitter.com/JunkieCricket/status/1124137767691280390
ಪಂದ್ಯದ 4ನೇ ಓವರಿನಲ್ಲಿ ಘಟನೆ ನಡೆದಿದ್ದು, ಮಿಡ್ ಆನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಪೊಲಾರ್ಡ್ ಬೌಂಡರಿಯತ್ತ ಸಾಗಿದ್ದ ಚೆಂಡನ್ನು ಬೆನ್ನಟ್ಟಿದ್ದಾರೆ. ಬೌಂಡರಿ ಗೆರೆಯ ಬಳಿ ಕಾಲಿನಿಂದ ಬಾಲನ್ನು ತಡೆದು ನಿಲ್ಲಿಸುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ವೇಗವಾಗಿ ಓಡಿದ್ದ ಕಾರಣ ನಿಯಂತ್ರಣ ತಪ್ಪಿ ಬೌಂಡರಿ ಗೆರೆ ಅಳವಡಿಸಿದ್ದ ಬ್ಯಾರಿಕೇಡ್ ಹಾರಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕ್ಷಣಕಾಲ ಕ್ರೀಡಾಂಗಣದಲ್ಲಿದ್ದ ಆಟಗಾರು ಶಾಕ್ ಆಗಿದ್ದರು.
ಘಟನೆಯಲ್ಲಿ ಪೊಲಾರ್ಡ್ ಅವರಿಗೆ ಯಾವುದೇ ರೀತಿ ಗಾಯಗೊಂಡಿಲ್ಲ ಎಂದು ಮುಂಬೈ ಇಂಡಿಯನ್ಸ್ ತಂಡ ಸ್ಪಷ್ಟಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಪಂದ್ಯದಲ್ಲಿ ಸೂಪರ್ ಓವರ್ ಮೂಲಕ ಮುಂಬೈ ಜಯ ಪಡೆದಿದ್ದು ವಿಶೇಷವಾಗಿತ್ತು.

Leave a Reply