72ನೇ ವಯಸ್ಸಲ್ಲಿ ಗಂಡು ಮಗುವಿನ ತಂದೆಯಾದ್ರಾ ಸಂಭಾಜಿ ಪಾಟೀಲ್?

ಬೆಳಗಾವಿ: ಎಂಇಎಸ್ ನ ಮಾಜಿ ಶಾಸಕ ಸಂಭಾಜಿ ಪಾಟೀಲ್ ಇಳಿ ವಯಸ್ಸಿನಲ್ಲೂ ಗಂಡು ಮಗುವಿಗೆ ತಂದೆಯಾದರಾ ಎಂಬ ಪ್ರಶ್ನೆಯೊಂದು ಮೂಡಿದೆ.

2016ರಲ್ಲಿ ಮಹಾರಾಷ್ಟ್ರದ ಸಾಂಗ್ಲಿಯ ಸ್ವಾನಂದ ನರ್ಸಿಂಗ್ ಹೋಮ್‍ನಲ್ಲಿ ಸಂಭಾಜಿ ಪಾಟೀಲ್ ಅವರ ಎರಡನೇ ಪತ್ನಿ ಉಜ್ವಲಾ ಗಂಡು ಮಗು ಜನ್ಮ ನೀಡಿದ್ದಾರಾ ಎಂಬ ಅನುಮಾನ ಮೂಡಿದೆ. ಏಕೆಂದರೆ ಆಸ್ಪತ್ರೆಯಲ್ಲೇ ಮಗು ಹುಟ್ಟಿದೆ ಎನ್ನಲಾದ ಕೆಲವು ದಾಖಲೆಗಳು ಬಹಿರಂಗಗೊಂಡಿವೆ. ಆದರೆ ಇಲ್ಲಿಯವರೆಗೂ ಸಂಭಾಜಿ ಪಾಟೀಲ್ ಒಬ್ಬನೇ ಮಗ ಇದ್ದಾನೆ ಎಂದು ಹೇಳಿಕೊಂಡಿದ್ದರು. ಆದರೆ ಈಗ ಮತ್ತೋರ್ವ ಮಗನ ಜನ್ಮ ದಾಖಲಾತಿ ಬಹಿರಂಗವಾಗಿದೆ. ಸಂಭಾಜಿ ಪಾಟೀಲ್ ನಡೆಯಿಂದ ಹಲವು ಅನುಮಾನಗಳು ಹುಟ್ಟು ಹಾಕಿದೆ.

ಸಂಭಾಜಿ ಪಾಟೀಲ್ ಗೆ ಮಕ್ಕಳೇ ಆಗಿಲ್ಲ ಎಂದು ಪುತ್ರ ಸಾಗರ್ ಪತ್ನಿ ಶೀತಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮೂರು ವರ್ಷದ ಹಿಂದೆ ಹುಟ್ಟಿರುವುದು ಮಗ ಅಲ್ಲ. ಅದು ನಕಲಿ ಜನನ ಪ್ರಮಾಣ ಪತ್ರ. ಆಸ್ತಿಗಾಗಿ ನಕಲಿ ಜನ್ಮ ಪ್ರಮಾಣ ಪತ್ರ ಪಡೆದು ಸೊಸೆಗೆ ವಂಚಿಸಲು ಯತ್ನಿಸುತ್ತಿದ್ದಾರೆ. 70ರ ವಯಸ್ಸಿನಲ್ಲಿರುವ ಸಂಭಾಜಿ ಪಾಟೀಲ್ ಪತ್ನಿ ಉಜ್ವಲಾಗೆ ಮಕ್ಕಳಾಗಲು ಸಾಧ್ಯವಿಲ್ಲ. ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.

ಸೊಸೆ ಶೀತಲ್ ಸಾಂಗ್ಲಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಚಲಿಸುವ ರೈಲಿನಲ್ಲಿ ಆಯತಪ್ಪಿ ಬಿದ್ದು ಮಗ ಸಾಗರ್ ಮೃತ ಪಟ್ಟಿದ್ದಾರೆ. ಸಾಗರನ ಸಾವು ಅಸಹಜ ಅಲ್ಲ ಅದು ಕೊಲೆ ಎಂದು ಸೊಸೆ ಶೀತಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Comments

Leave a Reply

Your email address will not be published. Required fields are marked *