ಶಾಸಕ ಧರಣಿ- ಅಕ್ರಮ ಮರಳಿನ 13 ಲಾರಿ ಸೀಜ್ ನಾಟಕ

ಶಿವಮೊಗ್ಗ: ಅಕ್ರಮ ಮರಳುಗಾರಿಕೆ ವಿರುದ್ದ ಶಾಸಕರು ಪಟ್ಟು ಹಿಡಿದು ಧರಣಿ ಕೂರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು 13 ಲಾರಿಗಳ ಸೀಜ್ ಮಾಡಿದ ನಾಟಕೀಯ ಘಟನೆ ಹೊಸನಗರದಲ್ಲಿ ನಡೆದಿದೆ.

ಹೊಸನಗರ ಸಮೀಪದ ಮಣಸಟ್ಟೆ ಮರಳು ಸ್ಟಾಕ್ ಯಾರ್ಡ್ ನಲ್ಲಿ ಸುಮಾರು ಎರಡು ಸಾವಿರ ಲೋಡ್ ಮರಳನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿತ್ತು. ಇಲ್ಲಿ ಸಾಕಷ್ಟು ಮರಳು ಇದ್ದರೂ ಸ್ಥಳೀಯರಿಗೆ ಸಿಗುತ್ತಿರಲಿಲ್ಲ. ಈ ಬಗ್ಗೆ ಶಾಸಕ ಹರತಾಳು ಹಾಲಪ್ಪ ಮರಳು ಯಾರ್ಡ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಅಧಿಕಾರಿಗಳ ಸಭೆ ನಡೆಸಿದರು. ಆಗ ಈ ಮರಳು ಸಂಗ್ರಹದ ಬಗ್ಗೆ ಸಮರ್ಪಕವಾದ ಮಾಹಿತಿ ಸಿಗಲಿಲ್ಲ. ಇದರಿಂದ ಅಸಮಾಧಾನಗೊಂಡ ಶಾಸಕ ಹರತಾಳು ಹಾಲಪ್ಪ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಕೂತರು. ಡಿಸಿ, ಎಸ್ಪಿ ಬರುವವರೆಗೂ ಧರಣಿ ನಿಲ್ಲಿಸುವುದಿಲ್ಲ. ಅಹೋರಾತ್ರಿ ಧರಣಿ ನಡೆಸುವೆ ಎಂದು ಕೂತರು. ಈ ಪ್ರತಿಭಟನೆಗೆ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಸ್ವಾಮಿರಾವ್ ಇನ್ನಿತರರು ಸಾಥ್ ನೀಡಿದರು.

ಈ ಧರಣಿ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಹೊಸನಗರಕ್ಕೆ ಆಗಮಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ರಶ್ಮಿ ಇನ್ನಿತರರು 13 ಲಾರಿಗಳನ್ನು ಸೀಜ್ ಮಾಡಿದ್ದಾರೆ. ಈ ಮಣಸೆಟ್ಟಿ ಸ್ಟಾಕ್ ಯಾರ್ಡ್ ನಲ್ಲಿ ಕಳೆದ ಎರಡು- ಮೂರು ತಿಂಗಳಿಂದ ಈ ರೀತಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಕಣ್ಮುಚ್ಚಿ ಕೂತಿದ್ದ ಅಧಿಕಾರಿಗಳು ಈಗ ಎಚ್ಚರಗೊಂಡಿದ್ದಾರೆ. ಈ ಸ್ಟಾಕ್ ಯಾರ್ಡ್ ಸುತ್ತಲೂ ಬೇಲಿ ಅಥವಾ ಕಾಂಪೌಂಡ್ ನಿರ್ಮಿಸಿಲ್ಲ, ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿಲ್ಲ. ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕೂತಿದ್ದರು. ಈಗ ಇಲ್ಲಿರು ಸುಮಾರು 2 ಸಾವಿರ ಲೋಡ್ ಅಕ್ರಮ ಮರಳನ್ನೂ ಸೀಜ್ ಮಾಡಬೇಕಿದೆ.

Comments

Leave a Reply

Your email address will not be published. Required fields are marked *