13 ಬಾಲೆ ಮೇಲೆ ಅತ್ಯಾಚಾರ – ಕರೆಂಟ್ ಶಾಕ್ ನೀಡಿ ಕೊಲೆಗೈದ ಅಪ್ರಾಪ್ತ

ಚೆನ್ನೈ: ಅಪ್ರಾಪ್ತ ಬಾಲಕನೊಬ್ಬ ನೆರೆ ಮನೆಯ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಉತ್ತರ ಮದುರೈ ಪ್ರದೇಶದ ದಿಂಡಿಗಲ್ ಬಳಿ ನಡೆದಿದೆ.

ಬಾಲಕಿಯ ಪೋಷಕರು ಕೂಲಿ ಕಾರ್ಮಿಕರಾಗಿದ್ದು ಮಗಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದ್ದರು. ಇದೇ ಸಮಯ ನೋಡಿ ಆರೋಪಿ ಮನೆಗೆ ಪ್ರವೇಶ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಸಂದರ್ಭದಲ್ಲಿ ಬಾಲಕಿ ಪ್ರತಿರೋಧ ತೋರಿದ್ದು, ರಕ್ಷಣೆಗಾಗಿ ಕಿರುಚಾಡಲು ಆರಂಭಿಸಿದ್ದಾಳೆ. ಈ ವೇಳೆ ಬಾಲಕಿ ಮೇಲೆ ಹಲ್ಲೆ ನಡೆಸಿದ ಆರೋಪಿ ಅಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಆರೋಪಿಯ ಕೃತ್ಯದಿಂದ ಆಕೆ ಮನೆಯಲ್ಲಿ ಪ್ರಜ್ಞಾನಹೀಳಾಗಿ ಬಿದ್ದಿದ್ದು, ತನ್ನ ಕೃತ್ಯವನ್ನು ಎಲ್ಲಿ ಬಯಲಿಗೆ ತರುತ್ತಾಳೋ ಎಂಬ ಭಯದಿಂದ ಆರೋಪಿ ಮನೆಯಲ್ಲಿದ್ದ ವಿದ್ಯುತ್ ತಂತಿಯನ್ನು ಆಕೆಯ ಬಾಯಿಗೆ ಇಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.

ಕೆಲಸ ಮುಗಿಸಿ ಸಂಜೆ ವೇಳೆಗೆ ಪೋಷಕರು ಮನೆಗೆ ಹಿಂದಿರುಗಿದ್ದು, ಈ ವೇಳೆ ಬಾಲಕಿ ವಿದ್ಯುತ್ ಶಾಕ್ ನಿಂದ ಮೃತ ಪಟ್ಟಿದ್ದಾಳೆ ಎಂದು ತಿಳಿದು ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಆದರೆ ಬಾಲಕಿಯ ಮೂಗಿನಿಂದ ಹಾಗೂ ದೇಹದ ಮೇಲೆ ರಕ್ತದ ಕಲೆ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ಖಚಿತವಾಗಿತ್ತು.

ಬಾಲಕಿಯ ಪೋಷಕರು ಅಪ್ರಾಪ್ತ ಬಾಲಕನ ಮೇಲೆ ಅನುಮಾನ ವ್ಯಕ್ತಪಡಿಸಿದ ವೇಳೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Comments

Leave a Reply

Your email address will not be published. Required fields are marked *