ತನ್ನನ್ನು, ಮಕ್ಕಳನ್ನ ಬಿಟ್ಟು ಹೋಗ್ತಾರೆ ಎಂಬ ಭಯದಲ್ಲೇ ಪತಿಯ ಕೊಲೆ

ಮುಂಬೈ: ಮಹಿಳೆಯೊಬ್ಬಳು ತನ್ನ ಪತಿ ಮಕ್ಕಳನ್ನು ಕಳೆದುಕೊಳ್ಳುವ ಭಯದಿಂದಲೇ ಪತಿಯನ್ನು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಮೃತ ಪತಿಯನ್ನು ಶಿವಸೇನಾ ನಾಯಕ ಎಂದು ಗುರುತಿಸಲಾಗಿದೆ. ಆರೋಪಿ ಪತ್ನಿ ಸ್ಥಳೀಯ ಅಂಗಡಿಯವನು ಮತ್ತು ಆತನ ಸಹಚರರ ಸಹಾಯವನ್ನು ಪಡೆದುಕೊಂಡು ಪತಿಯನ್ನು ಕೊಲೆ ಮಾಡಿದ್ದಾಳೆ.

ಏನಿದು ಪ್ರಕರಣ?
ಮೃತ ಪತಿ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡಿದ್ದನು. ಈ ಬಗ್ಗೆ ಪತ್ನಿಗೆ ತಿಳಿದಿದ್ದು, ಆಕೆಗಾಗಿ ತನ್ನನ್ನು ಮತ್ತು ಮಕ್ಕಳನ್ನು ಬಿಟ್ಟುಬಿಡುತ್ತಾನೆ ಎಂದು ಭಯಗೊಂಡಿದ್ದಳು. ಇದರಿಂದ ಪತ್ನಿಯನ್ನೇ ಕೊಲೆ ಮಾಡಲು ಆಕೆ ನಿರ್ಧಾರ ಮಾಡಿದ್ದಾಳೆ.

ಅದರಂತೆಯೇ ರಾತ್ರಿ ಪತಿ ನಿದ್ದೆ ಮಾಡುವಾಗ ಮನೆಯ ಎಲ್ಲ ಲೈಟ್‍ಗಳನ್ನು ಆಫ್ ಮಾಡಿದ್ದಾಳೆ. ಆಗ ದಾಳಿಕೋರರು ಮನೆಯೊಳಗೆ ನುಗ್ಗಿ ನಿದ್ದೆ ಮಾಡುತ್ತಿದ್ದ ಶಿನಸೇನಾ ನಾಯಕನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ಕಾರಿನ ಸಮೇತ ಕಾಡಿನಲ್ಲಿ ಬಿಟ್ಟು ಬಂದಿದ್ದಾರೆ. ಐದು ದಿನಗಳ ನಂತರ ಥಾಣೆಯ ಶಹಪುರ ಭಾಗದಲ್ಲಿ ಸುಟ್ಟ ದೇಹವೊಂದು ಪತ್ತೆಯಾಗಿದೆ.

ಪೊಲೀಸರು ಮೃತ ವ್ಯಕ್ತಿಯ ಗುರುತನ್ನು ಕಾರಿನ ನಂಬರ್ ಪ್ಲೇಟ್ ಸಹಾಯದಿಂದ ಗುರುತಿಸಿದ್ದಾರೆ. ನಂತರ ಮನೆಯ ವಿಳಾಸ ತಿಳಿದುಕೊಂಡು ಪೊಲೀಸರು ವಿಚಾರಣೆ ಮಾಡಲು ಹೋಗಿದ್ದಾರೆ. ಆಗ ಪತ್ನಿ ಕೆಲವು ದಿನಗಳಿಂದ ಪತಿ ಕಾಣೆಯಾಗಿದ್ದಾನೆ ಎಂದು ತಿಳಿಸಿದ್ದಾಳೆ. ಆದರೆ ಪತಿ ಕಾಣೆಯಾದ ಬಗ್ಗೆ ಆಕೆ ದೂರು ದಾಖಲಿಸಿರಲಿಲ್ಲ. ಇದರಿಂದ ಪೊಲೀಸರಿಗೆ ಆಕೆಯ ಮೇಲೆ ಅನುಮಾನ ಬಂದಿದೆ.

ಅಷ್ಟೇ ಅಲ್ಲದೆ ಮೃತದೇಹವನ್ನು ಗುರುತಿಸಲು ಕರೆದುಕೊಂಡು ಹೋಗಿದ್ದಾಗ ಪತಿ ಮುಖವನ್ನು ಸರಿಯಾಗಿ ನೋಡುವ ಮೊದಲೆ ಈತನೇ ನನ್ನ ಪತಿ ಎಂದು ಹೇಳಿದ್ದಾಳೆ. ಈ ವೇಳೆ ಪೊಲೀಸರು ಅನುಮಾನದ ಮೇರೆಗೆ ಮೃತ ಪತಿ ಮತ್ತು ಆಕೆಯ ಫೋನ್ ವಿವರಗಳನ್ನು ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ ಮೃತ ವ್ಯಕ್ತಿಯ ಅನೈತಿಕ ಸಂಬಂಧ ಬಗ್ಗೆ ತಿಳಿದಿದೆ. ಈ ಕಾರಣದಿಂದಲೇ ಪತಿಯನ್ನು ಕೊಲೆ ಮಾಡಿರುವುದು ತಿಳಿದು ಬಂದಿದೆ. ಬಳಿಕ ಆಕೆಯನ್ನು ವಿಚಾರಣೆ ಮಾಡಿದಾಗ ತಾನೇ ಈ ಕೊಲೆ ಮಾಡಿಸಿರುವುದಾಗಿ ಒಪ್ಪಿಕೊಂಡಿದ್ದಾಳೆ. ಸದ್ಯಕ್ಕೆ ಕೊಲೆಗೆ ಸಹಾಯ ಮಾಡಿದ್ದ ಅಂಗಡಿಯವನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *