ಸಿಎಂ ಕುಮಾರಸ್ವಾಮಿ ಕಾರಿಗೆ ಬೆಂಕಿ-ತಪ್ಪಿದ ಭಾರೀ ಅವಘಡ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಭಾರೀ ಅವಘಡವೊಂದು ತಪ್ಪಿದಂತಾಗಿದೆ.

ಬುಧವಾರ ಮಧ್ಯರಾತ್ರಿ ಶ್ರೀರಂಗಪಟ್ಟಣದ ಪೀಹಳ್ಳಿ ಸಮೀಪ ಈ ಅವಘಡ ನಡೆದಿದ್ದು, ಸಿಎಂ ಕುಮಾರಸ್ವಾಮಿ ಕಾರಿನಲ್ಲಿರುವಾಗಲೇ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಆಪ್ತ ಸಿಬ್ಬಂದಿ ತಕ್ಷಣ ಸಿಎಂ ಕುಮಾರಸ್ವಾಮಿ ಅವರನ್ನು ಕೆಳಗಿಳಿಸಿದ್ದಾರೆ. ಅದೃಷ್ಟವಶಾತ್ ಅಪಾಯದಿಂದ ಕುಮಾರಸ್ವಾಮಿ ಪಾರಾಗಿದ್ದಾರೆ.

ರೇಂಜ್‍ರೋವರ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಬೇರೊಂದು ಕಾರಿನಲ್ಲಿ ಕೆಆರ್ ಎಸ್‍ಗೆ ತೆರಳಿದ್ದಾರೆ. ಸಿಎಂ ಕುಮಾರಸ್ವಾಮಿ ಬರುತ್ತಾರೆ ಎಂದು ಜನತೆ ಪಟಾಕಿ ಸಿಡಿಸಿದ್ದರು. ಆ ಪಟಾಕಿ ಕಿಡಿಯಿಂದ ರೇಂಜ್‍ರೋವರ್ ನಲ್ಲಿ ಬೆಂಕಿ ಕಾಣಿಸಿಕೊಳ್ತಾ? ಅಥವಾ ರೇಂಜ್‍ರೋವರ್ ನಲ್ಲಿ ತಾಂತ್ರಿಕ ದೋಷನಾ ಇತ್ತ? ಎಂಬ ಅನುಮಾನ ಮೂಡಿದೆ. ಸದ್ಯಕ್ಕೆ ನಿಖರ ಕಾರಣ ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *