ಮಕ್ಕಳೊಂದಿಗೆ ಮಗುವಾದ ಎಂಎಸ್‍ಡಿ : ವಿಡಿಯೋ

ಚೆನ್ನೈ: 2019ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭವನ್ನು ಪಡೆದಿದ್ದು, ಆಡಿರುವ 5 ಪಂದ್ಯದಲ್ಲಿ 4ರಲ್ಲಿ ಗೆದ್ದು ಬೀಗಿದೆ. ಆ ಮೂಲಕ ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ.

ಚೆನ್ನೈನ ಚಿಪಾಕ್ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ಚೆನ್ನೈ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಳವಾಗಿದೆ. ಪಂದ್ಯದ ಬಳಿಕ ಸಿಎಸ್‍ಕೆ ನಾಯಕ ಧೋನಿ ಕ್ರೀಡಾಂಗಣದಲ್ಲಿ ಮಕ್ಕಳೊಂದಿಗೆ ಸೇರಿ ಮನರಂಜನೆ ನೀಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಾದ ಇಮ್ರಾನ್ ತಹೀರ್, ವ್ಯಾಟ್ಸನ್ ಅವರ ಪುತ್ರರು ಪಂದ್ಯದ ಬಳಿಕ ಮೈದಾನದಲ್ಲಿ ಓಡುವ ಸವಾಲು ಹಾಕಿ ತಮ್ಮ ಸಮಯವನ್ನು ಕಳೆಯುತ್ತಿದ್ರು. ಈ ವೇಳೆ ಮಧ್ಯ ಪ್ರವೇಶಿಸಿದ ಧೋನಿ ಮಕ್ಕಳೊಂದಿಗೆ ತಾವು ಓಡುವ ಮೂಲಕ ನೋಡುಗರಿಗೆ ಮತ್ತಷ್ಟು ಮನರಂಜನೆ ನೀಡಿದರು. ಸಿಎಸ್‍ಕೆ ಅಧಿಕೃತ ಟ್ಟಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಟ್ವೀಟ್ ಮಾಡಲಾಗಿದ್ದು, ವಿಡಿಯೋ ವೀಕ್ಷಿಸಿದ ಅಭಿಮಾನಿಗಳು ಧೋನಿ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂಬೈ ವಿರುದ್ಧ ಪಂದ್ಯದ ವೇಳೆಯೂ ಧೋನಿ ಹಿರಿಯ ಅಭಿಮಾನಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಧೋನಿಯನ್ನು ಭೇಟಿ ಆದ ಮಹಿಳೆ ‘ನಾನು ಧೋನಿಗಾಗಿ ಮಾತ್ರ ಇಲ್ಲಿಗೆ ಬಂದಿದ್ದೇನೆ ಎಂದಿದ್ದರು. ಹಿರಿಯರೊಂದಿಗೆ ಕೆಲ ಸಮಯ ಕಳೆದ ಅವರು ಪುಟ್ಟ ಬಾಲಕಿಗೆ ತಮ್ಮ ಹಸ್ತಾಕ್ಷರವಿದ್ದ ಜರ್ಸಿ ಗಿಫ್ಟ್ ನೀಡಿದ್ದರು. ಈ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು.

Comments

Leave a Reply

Your email address will not be published. Required fields are marked *