ಯುಪಿಎಸ್‍ಸಿ ಫಲಿತಾಂಶ ಪ್ರಕಟ: ರಾಹುಲ್ ಶರಣಪ್ಪ ರಾಜ್ಯಕ್ಕೆ ಟಾಪ್

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2018ನೇ ಸಾಲಿನ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ರಾಜ್ಯದ ಒಟ್ಟು 24 ಜನ ಆಯ್ಕೆಯಾಗಿದ್ದಾರೆ. ರಾಹುಲ್ ಶರಣಪ್ಪ ದೆಶಕ್ಕೆ 17ನೇ ರ್‍ಯಾಂಕ್‌ ಗಳಿಸಿದ್ದು, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಯುಪಿಎಸ್‍ಸಿ ರಾಜ್ಯದ ಟಾಪರ್ಸ್
ರಾಹುಲ್ ಶರಣಪ್ಪ ಸಂಕನೂರ – 17ನೇ ರ್‍ಯಾಂಕ್‌
ಲಕ್ಷ್ಮೀ.ಎನ್ – 45ನೇ ರ್‍ಯಾಂಕ್‌
ಆಕಾಶ್.ಎಸ್ – 78ನೇ ರ್‍ಯಾಂಕ್‌
ಕೃತಿಕ – 100ನೇ ರ್‍ಯಾಂಕ್‌
ಕೌಶಿಕ್.ಎಚ್.ಆರ್ – 240ನೇ ರ್‍ಯಾಂಕ್‌
ವಿವೇಕ್.ಎಚ್.ಬಿ – 257ನೇ ರ್‍ಯಾಂಕ್‌
ನಿವೇದಿತಾ – 303ನೇ ರ್‍ಯಾಂಕ್‌

ಗಿರೀಶ್‍ಧರ್ಮರಾಜ್ ಕಲಗೊಂಡ್ – 307ನೇ ರ್‍ಯಾಂಕ್‌
ಮಿರ್ಜಾ ಖಾದರ್ ಬೈಗಿ – 336ನೇ ರ್‍ಯಾಂಕ್‌
ತೇಜಸ್.ಯು.ಪಿ – 338ನೇ ರ್‍ಯಾಂಕ್‌
ಹರ್ಷವರ್ಧನ್.ಬಿ.ಜೆ – 352ನೇ ರ್‍ಯಾಂಕ್‌
ಪಕೀರೆಶ್.ಕಲ್ಲಪ್ಪ.ಬಾದಾಮಿ – 372ನೇ ರ್‍ಯಾಂಕ್‌
ಡಾ.ನಾಗಾರ್ಜುನ ಗೌಡ – 418ನೇ ರ್‍ಯಾಂಕ್‌
ಅಶ್ವಿಜಾ ಬಿವಿ – 423ನೇ ರ್‍ಯಾಂಕ್‌
ಮಂಜುನಾಥ್.ಆರ್ – 495 ನೇ ರ್‍ಯಾಂಕ್‌
ಬೃಂದಾ.ಎಸ್ – 496ನೇ ರ್‍ಯಾಂಕ್‌
ಹೇಮಂತ್ – 612ನೇ ರ್‍ಯಾಂಕ್‌

ಶೃತಿ.ಎಂ.ಕೆ – 637ನೇ ರ್‍ಯಾಂಕ್‌
ವೆಂಕಟ್‍ರಾಮ್ – 694ನೇ ರ್‍ಯಾಂಕ್‌
ಸಂತೋಷ ಹೆಚ್ – 753ನೇ ರ್‍ಯಾಂಕ್‌
ಅಶೋಕ್‍ಕುಮಾರ್.ಎಸ್ – 711ನೇ ರ್‍ಯಾಂಕ್‌
ರಾಘವೇಂದ್ರ ಎನ್ – 739ನೇ ರ್‍ಯಾಂಕ್‌
ಶಶಿಕಿರಣ್ – 754ನೇ ರ್‍ಯಾಂಕ್‌

ಈ ಬಾರಿ ದೇಶಾದ್ಯಂತ ಅಂದಾಜು 5 ಲಕ್ಷ ಅಭ್ಯರ್ಥಿಗಳು ಪ್ರಿಲಿಮಿನರಿ ಪರೀಕ್ಷೆ ಎದುರಿಸಿದ್ದರು. ಇದರಲ್ಲಿ 10,648 ಅಭ್ಯರ್ಥಿಗಳು ಮೇನ್ಸ್ ಗೆ ಉತ್ತೀರ್ಣರಾಗಿದ್ದರು. ಇವರಲ್ಲಿ ಅಂತಿಮವಾಗಿ 759 ಜನ ಕೇಂದ್ರ ನಾಗರಿಕ ಸೇವೆಗೆ ಆಯ್ಕೆಯಾಗಿದ್ದು, ಈ ಪೈಕಿ ರಾಜ್ಯದ 24 ಅಭ್ಯರ್ಥಿಗಳು ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಕೀರ್ತಿ ತಂದಿದ್ದಾರೆ.

Comments

Leave a Reply

Your email address will not be published. Required fields are marked *