ಮಂಕಿಯಾದ ಡಾಲಿ ಧನಂಜಯ್

ಬೆಂಗಳೂರು: ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಧನಂಜಯ್ ಗೆ ಆ ಚಿತ್ರ ಅಷ್ಟೇನೂ ಸಕ್ಸಸ್ ತಂದುಕೊಡಲಿಲ್ಲ. ಅದೇ ಟೀಮಿನ ಜತೆಗೆ ಎರಡನೇ ಸಲ ಚಿತ್ರದಲ್ಲೂ ಅಭಿನಯಿಸಿ ಕೈ ಸುಟ್ಟು ಕೊಂಡಿದ್ದ ಧನಂಜಯ್ ಕೈ ಹಿಡಿದದ್ದು ಸೂರಿ ನಿರ್ದೇಶನದ ಟಗರು ಸಿನಿಮಾ. ಹೌದು ಟಗರು ಚಿತ್ರ ಧನಂಜಯ್ ಪಾಲಿಗೆ ಅಕ್ಷಯ ಪಾತ್ರೆ ಅಂದ್ರೆ ತಪ್ಪಿಲ್ಲ. ಆ ಚಿತ್ರದ ಅಮೋಘ ಅಭಿನಯಕ್ಕೆ ಕನ್ನಡ ಮಾತ್ರವಲ್ಲದೇ ಸಾಲು ಸಾಲು ಅವಕಾಶಗಳು ಧನಂಜಯ್ ಪಾಲಿಗೆ ಬಂದದ್ದು ಆಶ್ಚರ್ಯದ ಜತೆಗೆ ಕೆಲವರ ಹೊಟ್ಟೆ ಉರಿಗೆ ರೀಸನ್ ಕೂಡ.

ಈಗಾಗಲೇ ಆರ್.ಜಿ.ವಿ ಗರಡಿಯಲ್ಲಿಯೂ ಭೈರವ ಗೀತಾ ಚಿತ್ರದ ಮೂಲಕ ಪಳಗಿ ಬಂದಿರುವ ಡಾಲಿ ಧನಂಜಯ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಮಿಠಾಯಿ ಸೂರಿಯಾಗಿಯೂ ಅಭಿನಯಿಸಿದ್ದಾರೆ. ಸದ್ಯ ಟಗರು ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಬ್ಯುಸಿಯಾಗಿರುವ ಡಾಲಿ ಧನಂಜಯ್ ಮೇಲೆ ಇನ್ನಿಲ್ಲದ ನಿರೀಕ್ಷೆ ಇರುವುದಂತೂ ನಿಜವೇ. ಆರಂಭದಲ್ಲಿ ಟೈಟಲ್ ಮೂಲಕವೇ ಭಾರಿ ಸದ್ದು ಮಾಡಿದ್ದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಅದಾದ ಮೇಲೆ ಸದ್ದಿಲ್ಲದೇ ಗಪ್ ಚುಪ್ ಆಗಿತ್ತು. ಈಗ ಮತ್ತೆ ಫಾರ್ಮ್ ಗೆ ಬಂದಿರುವ ಚಿತ್ರ ತಂಡ ಲೇಟೆಸ್ಟ್ ವಿಚಾರವೊಂದನ್ನು ಶೇರ್ ಮಾಡಿಕೊಂಡಿದೆ.

ಚಿತ್ರದ ಟೈಟಲ್ಲೇ ಸೂಚಿಸುವಂತೆ ಸಿನಿಮಾ ಮೂರು ಆ್ಯಂಗಲ್ ನಲ್ಲಿ ನಡೆಯೋ ಕಥೆಯಾಗಿದೆ. ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಧನಂಜಯ್ ಮಂಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಮಂಕಿಯ ಎರಡು ಪೋಸ್ಟರ್ ರಿಲೀಸ್ ಆಗಿದ್ದು, ಡಾಲಿ ತಲೆ ಬೋಳಿಸಿಕೊಂಡು ಟೆರರ್ ಲುಕ್‍ನಲ್ಲಿ ಮಿಂಚುತ್ತಿದ್ದಾರೆ.

ಅಂದಹಾಗೆ ಈಗಾಗಲೇ ಬೆಂಗಳೂರು, ಸೇರಿದಂತೆ ಬಹುತೇಕ ಕಡೆಗಳಲ್ಲಿ ಚಿತ್ರದ ಶೂಟಿಂಗ್ ಮುಗಿಸಿರೋ ಚಿತ್ರತಂಡ ಇದೀಗ ಮುಂಬೈಗೆ ಜಿಗಿದಿದೆ. ಚಿತ್ರಕ್ಕೆ ಅಗತ್ಯವಿರುವ ಲೊಕೇಷನ್ ಗಾಗಿ ಮುಂಬೈ ಸೆಲೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ. ಕನ್ನಡದಲ್ಲಿ ಘಜಿನಿ ರೂಪದಲ್ಲಿ ಡಾಲಿ ಕಾಣಿಸಿಕೊಳ್ಳಲಿರುವುದು ಮಾಸ್ ಅಭಿಮಾನಿಗಳ ಕೌತುಕವನ್ನು ನೂರ್ಮಡಿಗೊಳಿಸಿದೆ.

Comments

Leave a Reply

Your email address will not be published. Required fields are marked *