ಬಿಸ್ಕೇಟ್ ಕದ್ದಿದ್ದಕ್ಕೆ ಸೀನಿಯರ್‌ಗಳಿಂದ ಜೂನಿಯರ್‌ನ ಕೊಲೆ

– ಶಾಲಾ ಸಿಬ್ಬಂದಿ ಶವವನ್ನ ಕ್ಯಾಂಪಸ್‍ನಲ್ಲಿಯೇ ಹೂತು ಹಾಕಿದ್ರು

ಡೆಹ್ರಾಡೂನ್: ಹಿರಿಯ ವಿದ್ಯಾರ್ಥಿಗಳು ಮಾಡಿದ ಕೊಲೆಯನ್ನು ಮುಚ್ಚಿ ಹಾಕಲು ಶಾಲೆಯ ಸಿಬ್ಬಂದಿ 12 ವರ್ಷದ ಬಾಲಕನ ಶವ ಹೂತು ಹಾಕಿದ ಘಟನೆ ಉತ್ತರಖಂಡದ ಡೆಹ್ರಾಡೂನ್‍ನಲ್ಲಿ ನಡೆದಿದೆ.

ವಾಸು ಯಾದವ್ ಕೊಲೆಯಾದ ಬಾಲಕ. ವಾಸು ಯಾದವ್‍ನನ್ನು ಅದೇ ಶಾಲೆಯ ಹಿರಿಯ ವಿದ್ಯಾರ್ಥಿಗಳು ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್‍ಗಳಿಂದ ಹಲ್ಲೆ ಮಾಡಿದ್ದಾರೆ. ಬಳಿಕ ವಾಸುನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ವಾಸು ಯಾದವ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ ತಕ್ಷಣ ಶಾಲಾ ಸಿಬ್ಬಂದಿ ಆತನ ಮೃತದೇಹವನ್ನು ಶಾಲೆಯ ಆವರಣದಲ್ಲೇ ಹೂತು ಹಾಕಿದ್ದಾರೆ.

ನಡೆದಿದ್ದೇನು?
ವಾಸು ಯಾದವ್ ಬಿಸ್ಕೆಟ್ ಕದ್ದಿದ್ದಾನೆ ಎಂದು ಶಾಲೆಯ 12ನೇ ತರಗತಿಯ ವಿದ್ಯಾರ್ಥಿಗಳು ಆತನಿಗೆ ಕಿರುಕುಳ ನೀಡಿದ್ದರು. ಅಲ್ಲದೇ ಕ್ಲಾಸ್‍ರೂಮಿನಲ್ಲಿ ವಾರ್ಡ್‍ನ್ ಬರುವರೆಗೂ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ವಿದ್ಯಾರ್ಥಿಗಳು ವಾಸುವಿನ ಮೇಲೆ ಮಧ್ಯಾಹ್ನ ಹಲ್ಲೆ ನಡೆಸಿದ್ದರು. ಆದರೆ ಆತನನ್ನು ಸಂಜೆ ತಡವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತಡವಾಗಿದ್ದರಿಂದ ಆತ ಮೃತಪಟ್ಟಿದ್ದಾನೆ ಎಂದು ಎಸ್‍ಎಸ್‍ಪಿ ನಿವೇದಿತಾ ಕುಕ್ರೇತಿ ತಿಳಿಸಿದ್ದಾರೆ.

ಮಾರ್ಚ್ 10ರಂದು ಈ ಘಟನೆ ನಡೆದಿದ್ದು, ಮಾರ್ಚ್ 11ರಂದು ನಮಗೆ ಈ ವಿಷಯ ತಿಳಿದುಬಂತು. ಈ ಕೇಸಿನಿಂದ ನಮ್ಮ ಧ್ಯಾನ ಬೇರೆ ಕಡೆ ಮಾಡಲು ಸಾಕಷ್ಟು ಪ್ರಯತ್ನಗಳು ಕೂಡ ನಡೆದಿದೆ. ನಾವು ಶಾಲೆಗೆ ಭೇಟಿ ನೀಡಿದ್ದಾಗ ಶಾಲೆಯ ಸಿಬ್ಬಂದಿ ಬಾಲಕನ ಮೃತದೇಹ ಹೂತು ಹಾಕಿದ್ದನು ಗಮನಿಸಿದ್ದೇವೆ. ಶಾಲೆಯ ಸಿಬ್ಬಂದಿ ಬಾಲಕ ಮೃತಪಟ್ಟಿರುವ ವಿಷಯವನ್ನು ಪೋಷಕರು ತಿಳಿಸದೇ ಆತನ ಮೃತದೇಹವನ್ನು ಮಣ್ಣು ಮಾಡಿದ್ದರು ಎಂದು ರಾಜ್ಯ ಮಕ್ಕಳ ಹಕ್ಕುಗಳ ಸಮಿತಿ ಅಧ್ಯಕ್ಷೆ ಉಷಾ ನೇಗಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *