ಕೋಲ್ಕತ್ತಾ: ಕೆಕೆಆರ್ ಪಂದ್ಯದಲ್ಲಿ ತಂಡದ ನಾಯಕನಾಗಿ ತಪ್ಪು ಫೀಲ್ಡ್ ಸೆಟ್ ಮಾಡಿದ್ದ ಕಿಂಗ್ಸ್ ಇಲೆವೆನ್ ಪಂಬಾಜ್ ತಂಡದ ನಾಯಕ ಆರ್ ಅಶ್ವಿನ್ ಅವರನ್ನ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಹಿಂದಿನ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ‘ಮಂಕಡ್’ ರನೌಟ್ ಮಾಡಿ ಭಾರೀ ಚರ್ಚೆಗೆ ಕಾರಣರಾಗಿದ್ದ ಆರ್ ಅಶ್ವಿನ್, ಕ್ರಿಕೆಟ್ ನಿಯಮಗಳ ಅಡಿಯಲ್ಲೇ ರನೌಟ್ ಮಾಡಿದ್ದಾಗಿ ಸಮರ್ಥನೆ ನೀಡಿದ್ದರು. ಆದರೆ ಮರು ಪಂದ್ಯದಲ್ಲೇ ಅದೇ ನಿಯಮಗಳನ್ನು ಮರೆತು ಫೀಲ್ಡಿಂಗ್ ನಿರ್ವಹಿಸಿ ಟ್ರೋಲ್ ಆಗಿದ್ದಾರೆ.

ಪಂದ್ಯದ 16.5 ಓವರಿನ ಎಸೆತದಲ್ಲಿ ಕೆಕೆಆರ್ ತಂಡ ರಸೆಲ್ ಔಟಾಗಿದ್ದರು. ಈ ವೇಳೆ ನಿಮಯಗಳ ಅನ್ವಯ ಇನ್ ಸೈಡ್ ಸರ್ಕಲ್ ನಲ್ಲಿ 4 ಆಟಗಾರರು ಕಡ್ಡಾಯವಾಗಿ ಫೀಲ್ಡಿಂಗ್ ಮಾಡಬೇಕಿತ್ತು. ಆದರೆ ಅಶ್ವಿನ್ 3 ಆಟಗಾರನ್ನು ಮಾತ್ರ ನಿಯೋಜಿಸಿದ್ದರು. ಪರಿಣಾಮ ರಸೆಲ್ ಕ್ಲೀನ್ ಬೌಲ್ಡ್ ಆಗಿದ್ದರೂ ಕೂಡ ಜೀವದಾನ ಪಡೆದರು.
ಬಳಿಕ ಸ್ಫೋಟಕ ಆಟ ಪ್ರದರ್ಶಿಸಿದ ರಸೆಲ್ 19 ಎಸೆತಗಳಲ್ಲಿ 48 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. ಕೊನೆಯ ಓವರಿನಲ್ಲಿ ರಸೆಲ್ ಕ್ಯಾಚ್ ನೀಡಿ ಪೆವಿಲಿಯನ್ಗೆ ತೆರಳಿದರು. ಪಂದ್ಯದ ಬಳಿಕ ನಾಯಕನ ತಪ್ಪನ್ನೇ ಗುರಿ ಮಾಡಿ ಟ್ವೀಟ್ ಮಾಡಿರುವ ನೆಟ್ಟಿಗರು, ಅಶ್ವಿನ್ ‘ಕರ್ಮ’ವನ್ನು ಅನುಭವಿಸಿದ್ದಾರೆ ಎಂದು ಹೇಳಿ ಕಾಲೆಳೆಯುತ್ತಿದ್ದಾರೆ.
https://twitter.com/Gowthaman_Rockz/status/1110953803245719553
Poor captaincy 😅😅😅#KKRvKXIP #Ashwin pic.twitter.com/fC16qWQL23
— FlowerC (@littleZeeOp) March 27, 2019
#InstantKarma for RaviChandran Ashwin @ashwinravi99
— Short Dump (@ShortDump) March 28, 2019

Leave a Reply