ನಿಖಿಲ್ ಆಯ್ತು ಈಗ ದರ್ಶನ್-ಯಶ್ ಸರದಿ – ಜೋಡೆತ್ತುಗಳು ಕಾಣೆ ಎಂದು ನೆಟ್ಟಿಗರು ವ್ಯಂಗ್ಯ

ಮಂಡ್ಯ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಬಿರುಸಾಗಿ ಸಾಗುತ್ತಿದ್ದರೆ, ಅತ್ತ ಸಾಮಾಜಿಕ ಜಾಲತಾಣಗಳಲ್ಲೂ ಪರಸ್ಪರ ಕಾಲೆಳೆಯೋ ಟ್ರೋಲ್‍ಗಳು ನಡೆಯುತ್ತಿವೆ.

ಕಳೆದ ದಿನ ನಿಖಿಲ್ ಕುರಿತು ಟ್ರೋಲ್‍ಗಳು ಸಿಕ್ಕಾಪಟ್ಟೆ ಧೂಳೆಬ್ಬಿಸಿದ ಬೆನ್ನಲ್ಲೆ ಇದೀಗ ದರ್ಶನ್ ಹಾಗೂ ಯಶ್ ಪ್ರಚಾರದಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಭಿನ್ನ-ವಿಭಿನ್ನ ಟ್ರೋಲ್‍ಗಳು ಸುದ್ದಿ ಮಾಡುತ್ತಿವೆ. ಇದನ್ನೂ ಓದಿ: ನಿಖಿಲ್ ಎಲ್ಲಿದ್ದೀಯಪ್ಪ- ಟ್ರೋಲ್‍ಗೆ ಸಿಎಂ ಪುತ್ರ ಪ್ರತಿಕ್ರಿಯೆ

ಸುಮಲತಾ ನಾಮಪತ್ರ ಸಲ್ಲಿಕೆ ವೇಳೆ ಕಾಣಿಸಿಕೊಂಡಿದ್ದ ದರ್ಶನ್ ಹಾಗೂ ಯಶ್ ಬಳಿಕ ಪ್ರಚಾರಕ್ಕೆ ಬಂದಿಲ್ಲ. ಹೀಗಾಗಿ ಮಂಡ್ಯದಿಂದ ಜೋಡೆತ್ತುಗಳು ಕಾಣೆಯಾಗಿವೆ, ಮಿಸ್ಸಿಂಗ್ ಎಂದು ದರ್ಶನ್ ಮತ್ತು ಯಶ್ ಫೋಟೋ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಮಾಡಲಾಗುತ್ತಿದೆ.

ಶನಿವಾರ ಬೆಳಗ್ಗಿನ ಜಾವ 3 ಗಂಟೆಗೆ ದುಷ್ಕರ್ಮಿಗಳು ನಟ ದರ್ಶನ್ ಅವರ ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ಕಲ್ಲು ತೂರಿದ್ದರು.

ಕಲ್ಲು ತೂರಾಟದಿಂದ ದರ್ಶನ್ ಅವರ ಕಾರಿನ ಗಾಜು ಜಖಂ ಆಗಿದೆ. ಈ ಬಗ್ಗೆ ರಾಜರಾಜೇಶ್ವರಿನಗರ ಪೊಲೀಸರು ಹಾಗೂ ಕೆಂಗೇರಿ ಎಸಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಘಟನೆ ನಡೆದ ಬೆನ್ನಲ್ಲೆ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ನಟ ಯಶ್ ಮತ್ತು ಸುಮಲತಾ ಅವರ ಮನೆಗೂ ಬಿಗಿ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.

Comments

Leave a Reply

Your email address will not be published. Required fields are marked *