ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ವಿಜಯಲಕ್ಷ್ಮಿ ಮತ್ತು ಸಹೋದರಿ ಉಷಾದೇವಿ ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಟಿ ವಿಜಯಲಕ್ಷ್ಮಿಗೆ ಆಸ್ಪತ್ರೆ ಖರ್ಚಿಗೆ ಒಂದು ಲಕ್ಷ ಹಣ ಸಹಾಯ ಮಾಡಿದ ನಟ ರವಿಪ್ರಕಾಶ್ ಈ ಕುರಿತು ವಿಡಿಯೋ ಮೂಲಕ ಮಾಹಿತಿ ಕೊಟ್ಟಿದ್ದಾರೆ. ವಿಜಯಲಕ್ಷ್ಮಿ ಅವರಿಂದ ತಮಗಾಗಿರುವ ನೋವು ಮತ್ತು ಅವಮಾನಗಳ ಬಗ್ಗೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ನಟಿ ವಿಜಯಲಕ್ಷ್ಮಿ ನನ್ನಿಂದ ಸಹಾಯ ಪಡೆದು ಸಮಾಜದಲ್ಲಿ ನನಗೆ ಅವಮಾನವಾಗುವ ರೀತಿ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.

ಈ ಕುರಿತು ರವಿಪ್ರಕಾಶ್ ಈಗಾಗಲೇ ಫಿಲಂ ಚೇಂಬರ್‍ನಲ್ಲಿ ದೂರು ದಾಖಲಿಸಿದ್ದರು. ಸದ್ಯ ಈಗ ರವಿಪ್ರಕಾಶ್ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಘನತೆಗೆ ಧಕ್ಕೆತಂದಿರುವ ಆರೋಪ ಮೇಲೆ ದೂರು ದಾಖಲಾಗಿದೆ.
ಏನಿದು ಪ್ರಕರಣ?
ನಟಿ ವಿಜಯಲಕ್ಷ್ಮಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ವಿಜಯಲಕ್ಷ್ಮಿ ತಮಗೆ ನಟನೊಬ್ಬ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ಕೊಟ್ಟಿದ್ದರು. ನಟ ರವಿಪ್ರಕಾಶ್ ವಿರುದ್ಧ ವಿಜಯಲಕ್ಷ್ಮಿ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು. ಅಷ್ಟೇ ಅಲ್ಲದೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ರವಿಪ್ರಕಾಶ್ ವಿರುದ್ಧ ದೂರು ನೀಡಿದ್ದರು.

ನಾನು ಕಳೆದ ಕೆಲ ದಿನಗಳಿಂದ ಆನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಯುತ್ತಿದ್ದೇನೆ. ಹಣಕಾಸಿನ ನೆರವು ನೀಡಿ ಎಂದು ಸ್ಯಾಂಡಲ್‍ವುಡ್ ನ ಸ್ಟಾರ್ ನಟರಿಗೆ ಮನವಿ ಮಾಡಿಕೊಂಡಿದ್ದೆ. ಇದನ್ನು ನೋಡಿದ ನಟ ರವಿಪ್ರಕಾಶ್ ಫೆಬ್ರವರಿ 27ರಂದು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ, ಒಂದು ಲಕ್ಷ ನಗದು ಸೇರಿದಂತೆ ಬಟ್ಟೆ, ಊಟ, ತಿಂಡಿ ಸೇರಿದಂತೆ ಅವಶ್ಯಕ ವಸ್ತುಗಳನ್ನು ನೀಡಿದ್ದರು. ಇದಾದ ನಂತರ ಪ್ರತಿದಿನ ಆಸ್ಪತ್ರೆಯ ಐಸಿಯೂಗೆ ಬರೋದು, ಪದೇ ಪದೇ ಫೋನ್, ಮಸೇಜ್ ಮಾಡೋದು ಸೇರಿದಂತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ನಟಿ ದೂರಿನಲ್ಲಿ ಆರೋಪಿಸಿದ್ದರು.

Leave a Reply