ಬೆಂಗಳೂರು: ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ನಡೆದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂವಾದದ ವೇಳೆ ಬಿಜೆಪಿ ಕಾರ್ಯಕರ್ತರು ಟೆಕ್ಕಿಗಳ ವೇಷ ಧರಿಸಿ “ಮೋದಿ ಮೋದಿ” ಎಂಬ ಘೋಷಣೆ ಕೂಗಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯವರು ಗೋಡ್ಸೆ ಅನುಯಾಯಿಗಳು. ಬೇಕಾದರೆ ಗೋಡ್ಸೆ ಗೋಡ್ಸೆ ಅಂತ ಕರೆಯಲಿ. ಮೋದಿ ಭಕ್ತರು ಸಂಸ್ಕೃತಿ ಗೊತ್ತಿಲ್ಲದವರು. ಫ್ಲೆಕ್ಸ್ ಹಿಡಿದುಕೊಂಡು ಟೆಕ್ಕಿಗಳು ಕೆಲಸಕ್ಕೆ ಹೋಗುತ್ತಾರಾ? ಟೆಕ್ಕಿಗಳ ವೇಷದಲ್ಲಿ ಬಿಜೆಪಿ ಕಾರ್ಯಕರ್ತರು ಅಲ್ಲಿಗೆ ಬಂದಿದ್ದರು. ನಾವು ಮೋದಿ ಕಾರ್ಯಕ್ರಮದಲ್ಲಿ ಘೋಷಣೆ ಕೂಗಲು ಸಾಧ್ಯವಿಲ್ವೇ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ:ರಾಹುಲ್ ಸಂವಾದದ ವೇಳೆ ಮೋದಿ ಪರ ಘೋಷಣೆ ಕೂಗಿದ ಟೆಕ್ಕಿಗಳಿಗೆ ಲಾಠಿ ಏಟು

ಮೋದಿ ಸರ್ಕಾರ ಏರ್ ಸ್ಟ್ರೈಕ್ ಮಾಡುವ ಬದಲು ಪಾಕಿಸ್ತಾನ ಮೇಲೆ ಯುದ್ಧ ಮಾಡಬೇಕಿತ್ತು. ಯುದ್ಧ ಘೋಷಣೆ ಮಾಡಿದ್ರೆ ನಾವೆಲ್ಲರೂ ಬೆಂಬಲ ನೀಡುತ್ತಿದ್ದೇವು. ಯಾರೇ ಪ್ರಧಾನಿಯಾಗಿದ್ದರು ಬೆಂಬಲ ಕೊಡುತ್ತಿದ್ದೇವು. ಈ ಹಿಂದೆ ಪಾಕ್ ವಿರುದ್ಧ ಇಂದಿರಾ ಗಾಂಧಿ ಅವರು ಧೈರ್ಯದಿಂದ ಯುದ್ಧ ಘೋಷಣೆ ಮಾಡಿದ್ದರು. ಆಗ 93 ಸಾವಿರ ಸೈನಿಕರು ಸೆರೆ ಸಿಕ್ಕಿದ್ದರು. ಇವರು ಯುದ್ಧ ಮಾಡೋದು ಬಿಟ್ಟು ರಾತ್ರಿ ಬಾಂಬ್ ಹಾಕಿದ್ದೆ ದೊಡ್ಡದು ಅಂದು ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
https://twitter.com/BJP4Karnataka/status/1107673729218285568

Leave a Reply