ಅಪ್ಪ-ಅಮ್ಮ ಇಲ್ಲದ ನನಗೆ ರಾಯರೇ ತಂದೆ-ತಾಯಿ: ಬರ್ತ್ ಡೇ ಸಂಭ್ರಮದಲ್ಲಿ ಜಗ್ಗೇಶ್

ಬೆಂಗಳೂರು: ಇಂದು ಸ್ಯಾಂಡಲ್‍ವುಡ್ ನ ಇಬ್ಬರು ನಟರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 44ನೇ ಬರ್ತ್ ಡೇ ಆಚರಣೆಯಲ್ಲಿದ್ದರೆ, ಇತ್ತ ನವರಸ ನಾಯಕ, ಮಾತಿನ ಮಲ್ಲ ಜಗ್ಗೇಶ್ ಅವರು 56 ನೇ ವರ್ಷದ ಹುಟ್ಟುಹಬ್ಬದ ಆಚರಣೆಯಲ್ಲಿದ್ದಾರೆ.

ಜಗ್ಗೇಶ್ ಅವರ ಹುಟ್ಟುಹಬ್ಬ ಇಂದು ಇದ್ದ ಕಾರಣ ನಿನ್ನೆಯೇ ಅವರು ಪತ್ನಿ ಜೊತೆ ಮಂತ್ರಾಲಯಕ್ಕೆ ತೆರಳಿದ್ದಾರೆ. ಈ ಕುರಿತು ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ.

ಟ್ವೀಟ್ ನಲ್ಲೇನಿದೆ..?
ತಂದೆತಾಯಿ ರಾಯರ ಆಶೀರ್ವಾದ #ಮಾರ್ಚ್ 17 ರಂದು 56 ವರ್ಷಕ್ಕೆ ನನ್ನ ದೇಹ ಕಾಲಿಟ್ಟಿದೆ. ಅಪ್ಪ- ಅಮ್ಮ ಇಲ್ಲದ ನನಗೆ ರಾಯರೆ ತಂದೆ- ತಾಯಿ ಆಗಿದ್ದಾರೆ. ಹಾಗಾಗಿ ಪತ್ನಿ ಸಮೇತ ರಾಯರ ಆಶೀರ್ವಾದಕ್ಕೆ ಮಂತ್ರಾಲಯಕ್ಕೆ ಬಂದಿದ್ದೇನೆ. ರಾಯರು ಧರಿಸುತ್ತಿದ್ದ ಪಾದುಕೆ ಹಾಗು ರಾಯರೆ ಕೈಯಾರೆ ತಯಾರು ಮಾಡಿ ಪೂಜಿಸುತ್ತಿದ್ದ ಶ್ರೀನಿವಾಸದೇವರ ದರ್ಶನ ಪಡೆದೆವು ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಇಂದು ಮತ್ತೊಂದು ಟ್ವೀಟ್ ಮಾಡಿರುವ ಜಗ್ಗೇಶ್, ಹುಟ್ಟುಹಬ್ಬದ ಪ್ರಯುಕ್ತ ಶುಭಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಇದೇ ವೇಳೆ ನಟ ಪುನೀತ್ ರಾಜ್ ಕುಮಾರ್ ಹುಟ್ಟಹಬ್ಬಕ್ಕೂ ಶುಭಾಶಯ ಕೋರಿದ್ದಾರೆ.

ಇಂದಿನ ಟ್ವೀಟ್ ನಲ್ಲೇನಿದೆ..?
ತಂದೆ-ತಾಯಿ ರಾಯರ ಆಶೀರ್ವಾದ ಸದಾಬೇಡುವ ಈ ನನ್ನ ದೇಹಕ್ಕೆ 56 ವರ್ಷವಾಗಿದೆ. ನಿಮ್ಮೆಲ್ಲರ ಹಾಗು ನನ್ನ ಕುಟುಂಬದ ಹಾರೈಕೆಯಿಂದ ಓಡುವ ನನ್ನ ವಯಸ್ಸು ಆಯುಷ್ಯ ನಿಲ್ಲಿಸಿ ಸಾಧ್ಯವಾದಷ್ಟು ನಿಮಗೆಲ್ಲ ನಗಿಸಿ ಸಂತೋಷ ನೀಡುವ ಕಾಯಕ ಮಾಡುತ್ತಿರುವೆ. ಹರಸಿ ಹಾರೈಸುತ್ತಿರುವ ನಿಮಗೆ #ಮಾಧ್ಯಮಮಿತ್ರರಿಗೆ ಧನ್ಯವಾದಗಳು. ನನ್ನ ಗುರುಗಳ ಸಂಜಾತ ಪುನೀತ್ ರಾಜ್‍ಗೆ ಹ್ಯಾಪಿ ಬರ್ತ್ ಡೇ ಎಂದು ಬರೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *