ರಾಯಚೂರು: ರಾಜಕಾರಣಿಗಳು ವೈಯಕ್ತಿಕ ತೇಜೋವಧೆ ಬಿಡಬೇಕು. ಒಬ್ಬರ ಮೇಲೋಬ್ಬರು ಕೆಸರೆರಚಾಟ ಮಾಡುವುದನ್ನು ಬಿಟ್ಟು ದೇಶಕ್ಕೆ ತಮ್ಮಿಂದಾದ ಒಳಿತಿನ ಬಗ್ಗೆ ಮಾತನಾಡಬೇಕು ಎಂದು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ರಾಜಕಾರಣಿಗಳಿಗೆ ಕೀವಿಮಾತನ್ನು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಕಾರಣಿಗಳು, ಪಕ್ಷದ ಮುಖಂಡರು ಅವಹೇಳನಕಾರಿ ಹೇಳಿಕೆಗಳನ್ನು ನೀಡಬಾರದು. ಚುನಾವಣೆಯಲ್ಲಿ ತಮ್ಮ ಪಕ್ಷದ ಸಿದ್ಧಾಂತಗಳ ನೆಲೆಯಲ್ಲಿ ಪ್ರಚಾರ ಮಾಡಬೇಕು. ಕೆಸರೆರಚಾಟ ಬಿಟ್ಟು ದೇಶಕ್ಕೆ ತಮ್ಮಿಂದಾದ ಒಳಿತಿನ ಬಗ್ಗೆ ಮಾತನಾಡಬೇಕು. ಸುಳ್ಳು ಭರವಸೆ, ವೈಯಕ್ತಿಕ ಆರೋಪಗಳನ್ನು ಹೇಳಿ ಮತದಾರರನ್ನ ಕೆರಳಿಸಬಾರದು ಎಂದು ಚುನಾವಣಾ ಅಭ್ಯರ್ಥಿಗಳಿಗೆ ಹಾಗೂ ರಾಜಕೀಯ ನಾಯಕರಿಗೆ ತಿಳಿ ಹೇಳಿದ್ದಾರೆ.

ಹಾಗೆಯೇ, ಮತದಾನವನ್ನು ಎಲ್ಲರೂ ಕಡ್ಡಾಯವಾಗಿ ಮಾಡಬೇಕು. ಸೂಕ್ತವಾದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮತದಾನ ಹಕ್ಕನ್ನು ಚಲಾಯಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply