ನನ್ನ ಸ್ಪರ್ಧೆ ಬಗ್ಗೆ ಮಾರ್ಚ್ 18 ರಂದು ನಿರ್ಧಾರ: ಸುಮಲತಾ ಅಂಬರೀಶ್

ಮಂಡ್ಯ: ನನ್ನ ನಿರ್ಧಾರ ಏನು ಎನ್ನುವುದನ್ನು ಮಾರ್ಚ್ 18 ರಂದು ಅಧಿಕೃತವಾಗಿ ತಿಳಿಸುತ್ತೇನೆ ಎಂದು ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ.

ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಮಾತನಾಡಿದ ಸುಮಲತಾ ಅವರು, ನಟ ದರ್ಶನ್‍ನನ್ನು ಯಾಗಾವಲೂ ಭೇಟಿ ಮಾಡುತ್ತಾ ಇರುತ್ತೇವೆ. ನೀವು ಆರ್ಡರ್ ಮಾಡಿ ನಾನು ನಿಮ್ಮ ಮಾತನ್ನ ಕೇಳುತ್ತೇನೆ ಎಂದು ದರ್ಶನ್ ಹೇಳಿದ್ದಾರೆ. ದರ್ಶನ್ ನನ್ನ ಮದರ್ ಇಂಡಿಯಾ ಅಂತ ಕರೆಯುತ್ತಾರೆ. ಅಂಬರೀಶ್ ಇದ್ದಾಗ ದರ್ಶನ್ ನಮ್ಮ ಕುಟುಂಬದ ಮೇಲೆ ಹೇಗೆ ಪ್ರೀತಿ ಹೊಂದಿದ್ದರೋ, ಈಗಲೂ ಅದೇ ಪ್ರೀತಿ ಹೊಂದಿದ್ದಾರೆ. ಸಿನಿಮಾ ರಂಗದ ಹಲವರು ನನಗೆ ಸಪೊರ್ಟ್ ಮಾಡುತ್ತಾರೆ. ಅದು ಅಂಬರೀಶ್ ಮೇಲೆ ಇಟ್ಟಿರುವ ಪ್ರೀತಿಯಾಗಿದೆ ಎಂದು ಹೇಳಿದ್ದಾರೆ.

ಸಚಿವ ಡಿ.ಕೆ.ಶಿವಕುಮಾರ್ ಮಂಡ್ಯ ಕಾಂಗ್ರೆಸ್ಸಿಗರ ಜೊತೆ ಮಾತುಕತೆ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿ ಕಡೆಯಿಂದ ಸ್ಪರ್ಧೆ ಮಾಡಬೇಡಿ ಎಂಬ ಒತ್ತಡ ಬಂದಿಲ್ಲ. ಬೇರೆ ಕಡೆ ಸ್ಪರ್ಧಿಸಿ ಅಂತ ಸಲಹೆ ಕೊಟ್ಟಿದ್ದಾರೆ. ರಾಜಕೀಯದಲ್ಲಿ ಕೊನೆಗಳಿಗೆವರೆಗೂ ಏನು ಬೇಕಾದರೂ ಆಗಬಹುದು. ನನ್ನ ನಿರ್ಧಾರ ಏನು ಎನ್ನುವುದನ್ನು ಇದೇ 18 ರಂದು ಅಧಿಕೃತವಾಗಿ ಫೋಷಣೆ ಮಾಡುತ್ತೇನೆ ಎಂದು ಎಂದು ಸುಮಲತಾ ತಿಳಿಸಿದರು.

ಊಹಪೋಹಗಳನ್ನು ನಂಬಬೇಡಿ, ಇವತ್ತು ಸಹ ದೇವಸ್ಥಾನಕ್ಕೆ ಭೇಟಿ ಕೊಟ್ಟು ಬಂದಿದ್ದೇನೆ. ನಾನು ಹೋದ ಕಡೆಯೆಲ್ಲ ಅಭಿಮಾನಿಗಳು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ನಿಲ್ಲಲೇಬೇಕೆಂಬ ಒತ್ತಡ ಹಾಕುತ್ತಿದ್ದಾರೆ. ರೇವಣ್ಣ ಹೇಳಿಕೆ ಬಗ್ಗೆ ಸಿಎಂ ಕ್ಷಮೆ ಕೇಳಿರೋದು ಸಂತಸದ ವಿಚಾರವಾಗಿದೆ ಎಂದರು.

ನಾನು ಸಾಮಾಜಿಕ ಜಾಲತಾಣಗಳಲ್ಲಿ 10 ವರ್ಷದಿಂದ ಇದ್ದೇನೆ. ಆದರೆ ಈಗ ಜನ ಮತ್ತು ಅಭಿಮಾನಿಗಳ ಜೊತೆ ಸಂವಹನ ನಡೆಸಲು ನಾನು ಅಧಿಕೃತ ಫೇಸ್‍ಬುಕ್ ಪೇಜ್ ಖಾತೆ ತೆರೆದಿದ್ದೇನೆ. ರಾಜಕೀಯದಲ್ಲಿ ಅಪಪ್ರಚಾರ ಸಾಮಾನ್ಯವಾಗಿದೆ. ಅದಕ್ಕೆಲ್ಲಾ ನಾವು ತಲೆಕೆಡಿಸಿಕೊಳ್ಳಬಾರದು ಎಂದು ಸುಮಲತಾ ಅವರು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *