ಕೊಡಗು ಸಂತ್ರಸ್ತರಿಗೆ ಪಿಎಫ್‍ಐ ವತಿಯಿಂದ 18 ಲಕ್ಷ ಧನಸಹಾಯ

ಮಡಿಕೇರಿ: ಕಳೆದ ಆಗಸ್ಟ್ ನಲ್ಲಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವತಿಯಿಂದ ನೆರವು ನೀಡಲಾಯಿತು.

180 ಕುಟುಂಬಗಳಿಗೆ 18 ಲಕ್ಷ ರೂ. ಧನಸಹಾಯವನ್ನು ಸಂಘಟನೆಯಿಂದ ವಿತರಿಸಲಾಯಿತು. ಮುಖ್ಯವಾಗಿ ಮಳೆಯಿಂದ ಹಾನಿಯಾದ ಮನೆಗಳ ರಿಪೇರಿಗೆ ಹಣ ಬಳಸಿಕೊಳ್ಳುವಂತೆ ಸಂತ್ರಸ್ತರಿಗೆ ಸಂಘಟನೆ ಮನವಿ ಮಾಡಿದೆ.

ಕಳೆದ ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆ ಹಾಗೂ ಜಲಸ್ಫೋಟದಿಂದ ಸಾವಿರಾರು ಜನರು ಸಂತ್ರಸ್ತರಾಗಿದ್ದರು. 900ಕ್ಕೂ ಹೆಚ್ಚು ಮಂದಿ ಮನೆಯನ್ನು ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಯ್ದ 180 ಕುಟುಂಬಗಳಿಗೆ ಪಿಎಫ್‍ಐ ಸಂಘಟನೆ ನೆರವನ್ನು ನೀಡಿದೆ.

ಮಡಿಕೇರಿಯ ಕಮ್ಯೂನಿಟಿ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಅಮೀನ್ ಮೊಹಿಸೀನ್ ಸೇರಿದಂತೆ ಅನೇಕರು ಫಲಾನುಭವಿಗಳಿಗೆ ಸಹಾಯಧನ ವಿತರಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *