ಚಿಕ್ಕಮಗಳೂರು: ಸದಾ ತಂಪೆರೆಯೋ ಗಾಳಿ, ಹಚ್ಚ-ಹಸಿರಿನಿಂದ ಕಂಗೊಳಿಸುವ ಹಸಿರ ತವರು ಕಾಫಿನಾಡಲ್ಲಿ ಮನೆ ಮಾಡಬೇಕೆಂದು ಅದೆಷ್ಟೋ ಪ್ರವಾಸಿಗರ ಬಯಕೆ. ಆದರೆ ಚಿಕ್ಕಮಗಳೂರಿನ ಸದ್ಯದ ಹವಾಮಾನ ಕೇಳಿದ್ರೆ, ಇತ್ತ ತಲೆ ಹಾಕಿಯೂ ಮಲಗೊಲ್ಲ.
ಹೌದು. ವರ್ಷದಿಂದ ವರ್ಷಕ್ಕೆ ಕಾಫಿನಾಡು ಕಾದ ಕವಾಲಿಯಂತಾಗ್ತಿದೆ. ಏಕೆಂದರೆ ಈ ಬಾರಿ ಹಿಂದೆಂದೂ ಕಾಣದಂತ ಬಿಸಿಲು ನೆತ್ತಿ ಸುಡ್ತಿದೆ. ಕನಿಷ್ಠ 22 ರಿಂದ ಗರಿಷ್ಠ 26, 28ರವರೆಗಿದ್ದ ಬಿಸಿಲಿನ ತಾಪ ಈ ಬಾರಿ 38ರ ಗಡಿ ಮುಟ್ಟಿದೆ.

ಕೊಪ್ಪ, ಶೃಂಗೇರಿ, ಎನ್.ಆರ್ ಪುರ, ಮೂಡಿಗೆರೆಯ ಪರಿಸ್ಥಿತಿಯೂ ಚಿಕ್ಕಮಗಳೂರಿಗಿಂತ ಭಿನ್ನವಾಗಿಲ್ಲ. ಇನ್ನು ಜಿಲ್ಲೆಯ ಬಯಲುಸೀಮೆ ಪ್ರದೇಶಗಳಾಗಿರೋ ಕಡೂರು, ತರೀಕೆರೆಯ ಪರಿಸ್ಥಿತಿಯಂತು ಮತ್ತಷ್ಟು ಶೋಚನಿಯ. ಜನಸಾಮಾನ್ಯರು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾಫಿನಾಡು ರಾಜ್ಯದ ಕಲಬುರಗಿ, ಬೆಳಗಾವಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಬಿಸಿಲು ಏರುತ್ತಿರುವ ಮಧ್ಯೆ ಎಳನೀರು ಹಾಗೂ ಜ್ಯೂಸ್ ವ್ಯಾಪಾರ ಭರ್ಜರಿ ಆಗುತ್ತಿದೆ. ಹಿಂದೆ ಬೆಳಗ್ಗೆಯಿಂದ ಸಂಜೆಯವರೆಗೂ ಏಳನೀರು ಸಿಗುತಿತ್ತು. ಆದರೆ ಈಗ ಮಧ್ಯಾಹ್ನವೇ ಏಳನೀರು ಖಾಲಿಯಾಗುತ್ತಿದೆ. ಹೀಗಾಗಿ ಏಳನೀರು ವ್ಯಾಪಾರಿಗಳು ಹೆಚ್ಚು ಏಳನೀರನ್ನು ರೈತರಿಂದ ಖರೀದಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply