ಮಾಧ್ಯಮಗಳಲ್ಲಿ ಬರುತ್ತಿರುವ ವಿಡಿಯೋ ನಕಲಿ ಎಂದು ಒಪ್ಪಿಕೊಂಡ ಪಾಕಿಸ್ತಾನ

ನವದೆಹಲಿ: ಪಾಕಿಸ್ತಾನ ವಾಯುಸೇನೆ ಭಾರತದ ವಿಮಾನ ಹೊಡೆದುರುಳಿಸಿದ್ದಾಗಿ ಪಾಕ್ ಮಾಧ್ಯಮಗಳು ಹೇಳಿಕೊಂಡಿದ್ದವು. ಆದರೆ ಅದು ವಾಸ್ತವಾಗಿ 2016ರ ವಿಡಿಯೋ ಎಂದು ಪಾಕಿಸ್ತಾನ ಸೇನೆ ಒಪ್ಪಿಕೊಂಡಿದೆ.

ಪಾಕ್ ಮಾಧ್ಯಮಗಳು ಪ್ರಸಾರ ಮಾಡಿದ ವಿಡಿಯೋಗೂ ನಮ್ಮ ಸೇನೆಗೂ ಯಾವುದೇ ಸಂಬಂಧವಿಲ್ಲ. ಮಿ-17 ಹೆಲಿಕಾಪ್ಟರ್ ನ ಹಳೆಯ ವಿಡಿಯೋವನ್ನು ಮಾಧ್ಯಮಗಳು ಪ್ರಸಾರ ಮಾಡಿವೆ ಎಂದು ಪಾಕಿಸ್ತಾನ ಸೇನೆ ಸ್ಪಷ್ಟನೆ ನೀಡಿದೆ.

2016ರಲ್ಲಿ ಜೋಧ್‍ಪುರ್‍ನಲ್ಲಿ ಪತನವಾಗಿದ್ದ ಮಿಗ್ ವಿಮಾನದ ದೃಶ್ಯ ಬಳಸಿ ಇಂದು ನಾವು ಬುದ್ಗಾಮ್‍ನಲ್ಲಿ ಭಾರತದ ಎರಡು ಯುದ್ಧ ವಿಮಾನ ಹೊಡೆದು ಹಾಕಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ಹೇಳಿತ್ತು.

ಇದರ ಜೊತೆಯಲ್ಲೇ ಬೆಂಗಳೂರಿನ ಏರ್ ಶೋ ಪೂರ್ವಭಾವಿಯಾಗಿ ಯಲಹಂಕದಲ್ಲಿ ಪತನಗೊಂಡಿದ್ದ ಸೂರ್ಯಕಿರಣ್ ವಿಮಾನದ ಪೈಲಟ್ ಅವರನ್ನು ಸ್ಥಳೀಯರು ರಕ್ಷಿಸುತ್ತಿರುವ ವಿಡಿಯೋಗಳನ್ನು ಪಾಕ್ ಜನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ.

ಭಾರತದ ಎರಡು ವಿಮಾನಗಳು ನಾವು ಹೊಡೆದಿದ್ದೇವೆ ಎಂದು ಪಾಕಿಸ್ತಾನದ ಸೇನೆ ಹೇಳಿಕೊಂಡಿದ್ದು, ಈ ಸಂಬಂಧ ಪೈಲಟ್ ವಿಡಿಯೋವನ್ನು ರಿಲೀಸ್ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *