ಬೆಂಗಳೂರು: ಹಿರಿಯ ನಟ ಶಂಕರ್ ಅಶ್ವಥ್ ಅವರು ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರನ್ನು ತಮ್ಮ ಮಗಳು ಎಂದು ಹೇಳಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಜೊತೆಗಿರುವ ಫೋಟೋವನ್ನು ಶಂಕರ್ ಅಶ್ವಥ್ ಅವರು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ರಶ್ಮಿಕಾ ತಮ್ಮ ಮಗಳಂತೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಜೀವನ ನಿರ್ವಹಣೆಗೆ ಕ್ಯಾಬ್ ಡ್ರೈವರ್ ಆದ ಕೆ.ಎಸ್. ಅಶ್ವಥ್ ಪುತ್ರ!
ಪೋಸ್ಟ್ ನಲ್ಲಿ ಏನಿದೆ?
ನಾನು ಚಲನಚಿತ್ರರಂಗ ಪ್ರವೇಶ ಮಾಡಿ ಮೂರು ದಶಕಗಳಾದರೂ ಈ ಅನುಭವ ಎಂದು ಹೊಂದಿರಲಿಲ್ಲ. ಒಬ್ಬ ಪ್ರಖ್ಯಾತ ನಾಯಕ ನಟಿ, ನನ್ನನ್ನು ತಂದೆಯಂತೆ ಕಂಡಿದ್ದಳು. ಕತ್ತುಭುಜ ನೋವೆಂದು ಕುಳಿತಿದ್ದಾಗ ಹಿಂದಿನಿಂದ ಬಂದು ಭುಜವನ್ನು ಒತ್ತಿದ್ದು ಒಬ್ಬ ಮಗಳೇ ಸರಿ, ಇಂತಹ ಮಗಳನ್ನು ನಾನು ನಿಜ ಜೀವನದಲ್ಲಿ ಪಡೆದಿದ್ದರೆ ನನ್ನಂತಹ ಅದೃಷ್ಟಶಾಲಿ ಬೇರೆ ಯಾರೂ ಇರುತ್ತಿರಲಿಲ್ಲ, ಧನ್ಯವಾದಗಳು ರಶ್ಮಿಕಾ ಮಂದಣ್ಣ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್ಗೆ ಆಸರೆಯಾದ ದರ್ಶನ್!

ಶಂಕರ್ ಅಶ್ವಥ್ ಅವರು ಸಿನಿಮಾ ಆಫರ್ ಸಿಗದೇ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ‘ಯಜಮಾನ’ ಚಿತ್ರದ ಪಾತ್ರವೊಂದಕ್ಕೆ ನಟಿಸಲು ಶಂಕರ್ ಅಶ್ವಥ್ ಅವರಿಗೆ ಅವಕಾಶ ನೀಡಿದ್ದರು. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply