ಮಧ್ಯರಾತ್ರಿ ಯುವಕನನ್ನು ಅಡ್ಡಗಟ್ಟಿ ಕೊಲೆಗೈದ ದುಷ್ಕರ್ಮಿಗಳು

ಬೆಂಗಳೂರು: ಪಾರ್ಟಿಗೆ ಎಂದು ಮನೆಯಿಂದ ಹೊರಗೆ ಹೋಗಿದ್ದ ಯುವಕನನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಹಮ್ಮದ್ ಯುಸೂಫ್ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕೊಲೆಯಾದ ಯುವಕ. ಯುಸೂಫ್ ಮೂಲತಃ ಶಿವಮೊಗ್ಗದವ ನಿವಾಸಿಯಾಗಿದ್ದು, ಬಿಳಿಕಳ್ಳಿಯಲ್ಲಿ ವೆಲ್ಡಿಂಗ್ ಕೆಲಸ ಮಾಡ್ತಿದ್ದನು. ಪಾರ್ಟಿ ಮುಗಿಸಿ ರಾತ್ರಿ ಮನೆಗೆ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.

ಯುಸೂಫ್ ಶಿವಮೊಗ್ಗದಲ್ಲಿ ಮನೆಕಳ್ಳತನ ಮಾಡುತ್ತಿದ್ದನು. ಒಂದು ಬಾರಿ ಜೈಲಿಗೂ ಹೋಗಿದ್ದ ಕಾರಣ ತಂದೆ-ತಾಯಿ ಬೆಂಗಳೂರಿಗೆ ಕರೆ ತಂದು ಕೆಲಸಕ್ಕೆ ಸೇರಿಸಿದ್ದರು. ಯುಸೂಫ್ ಕೆಲಸ ಮಾಡಿಕೊಂಡು ಪುಡಾರಿ ಬಿದ್ದಿದ್ದ. ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಕೇಸ್ ಕೂಡ ದಾಖಲಾಗಿದೆ. ಕೊಲೆಯಾದ ಯುಸೂಫ್ ಇತ್ತೀಚೆಗೆ ರಿಯಲ್ ಎಸ್ಟೇಟ್‍ಗೆ ಕೈ ಹಾಕಿ ಹಲವರ ವೈಷಮ್ಯ ಕಟ್ಟಿಕೊಂಡಿದ್ದ ಎಂದು ತಿಳಿದು ಬಂದಿದೆ.

ಯುಸೂಫ್ ಗುರುವಾರ ರಾತ್ರಿ ಪಾರ್ಟಿ ಮುಗಿಸಿಕೊಂಡು ಬಿಳೆಕಳ್ಳಿ ಬಳಿ ಮನೆಗೆ ಹೋಗುತ್ತಿದ್ದ. ಪ್ರತ್ಯೇಕ ಎರಡು ಬೈಕ್‍ಗಳಲ್ಲಿ ಬಂದ ದುಷ್ಕರ್ಮಿಗಳು ಬೈಕ್ ಅಡ್ಡಗಟ್ಟಿ ಕೊಲೆ ಮಾಡಿದ್ದಾರೆ. ಈ ಘಟನೆ ಸಂಬಂಧ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಸೆಕ್ಷನ್ 302 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಕೊಲೆಯಾದ ಯುವಕ ಕೊಲೆ ಮಾಡಿದ ಯುವಕ ಇಬ್ಬರು ಒಂದೇ ಹುಡುಗಿಗೆ ಪ್ರೀತಿ ಮಾಡುತ್ತಿದ್ರು. ಈ ತ್ರಿಕೋನ ಪ್ರೇಮ ಕಥೆಯೇ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕೆವ್ಯಕ್ತವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *