ಬೆಂಗಳೂರು: ಬಂಡಾಯ ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ ಬಳಸಲು ಮುಂದಾಗಿರುವ ಕಾಂಗ್ರೆಸ್ ಕೊನೆಯ ಘಳಿಗೆಯವರೆಗೆ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ.
ಹೌದು. ಇಂದೇ ಅನರ್ಹತೆಗೆ ಶಿಫಾರಸ್ಸು ಮಾಡದೆ ಒಂದೆರಡು ದಿನ ಕಾದು ನೋಡಲು ಕೈ ಪಾಳಯ ನಿರ್ಧರಿಸಿದೆ. ಅತೃಪ್ತರು ರಾಜೀನಾಮೆ ನೀಡುವ ಸಾಧ್ಯತೆ ತೀರಾ ಕಡಿಮೆಯಿದ್ದು, ಅಧಿವೇಶನಕ್ಕೂ ಹಾಜರಾಗೋದು ಡೌಟು ಎನ್ನಲಾಗ್ತಿದೆ.

ಶುಕ್ರವಾರ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅತೃಪ್ತರ ಅನರ್ಹತೆಗೆ ಸ್ಪೀಕರ್ಗೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿತ್ತು. ಆದ್ರೆ ಇದೀಗ ಅತೃಪ್ತರಿಗೆ ಕಡೆಯ ಅವಕಾಶ ನೀಡುವ ಬಗ್ಗೆ ಯೋಚಿಸಲಾಗ್ತಿದೆ. ಶುಕ್ರವಾರ ಶಾಸಕರು ಗೈರಾಗುವ ಅಥವಾ ಸದನಕ್ಕೆ ಬಂದು ಕ್ರಾಸ್ ವೋಟಿಂಗ್ ಮಾಡಿದ್ರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಇದನ್ನೂ ಓದಿ: ಕೈ ಅತೃಪ್ತರ ಅನರ್ಹತೆ ಯಾವಾಗ? ಕಾಂಗ್ರೆಸ್ ನಡೆ ಏನು?

ರಾಜೀನಾಮೆಯಿಂದ ಏನು ಪ್ರಯೋಜನವಿಲ್ಲ ಎಂಬುದನ್ನ ಅರಿತ ಶಾಸಕರು ಸದನಕ್ಕೆ ಬಂದು ಅವಮಾನ ಎದುರಿಸುವ ಬದಲು, ಬಜೆಟ್ ಅನುಮೋದನೆ ದಿನವೇ ಬಂದು ಸದನದಲ್ಲಿ ಬಂದು ತಮ್ಮ ಸಹಮತ ವ್ಯಕ್ತಪಡಿಸಿ ಅನರ್ಹತೆ ಭೀತಿಯಿಂದ ಪಾರಾಗುವ ಸಾಧ್ಯತೆ ಇದೆ ಎಂಬುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅತೃಪ್ತರು ಗೈರಾಗಿದ್ದು ಯಾಕೆ? ಅನರ್ಹತೆಗೊಳಿಸಿದ್ದು ಯಾಕೆ? ಸಿದ್ದರಾಮಯ್ಯ ನೀಡಿದ ಸ್ಪಷ್ಟನೆ ಏನು?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply