ಬಿಜೆಪಿ ಅವರು ನನಗೂ 30 ಕೋಟಿ ಕೊಡಲು ಬಂದಿದ್ರು: ಶಾಸಕ ಶ್ರೀನಿವಾಸ್ ಗೌಡ

ಕೋಲಾರ: ಬಿಜೆಪಿ ವಿರುದ್ಧ ಮತ್ತೊಂದು ಆಪರೇಷನ್ ಬಾಂಬ್ ಸಿಡಿದಿದೆ. ಮೂರು ತಿಂಗಳ ಹಿಂದೆ ಬಿಜೆಪಿಯವರು ನನಗೂ 30 ಕೋಟಿ ನೀಡಲು ಬಂದಿದ್ದರು ಎಂದು ಕೋಲಾರ ಶಾಸಕ ಶ್ರೀನಿವಾಸ್ ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

ಕೋಲಾರದ ಶಾಸಕರ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ಮೂರು ತಿಂಗಳ ಹಿಂದೆ ನನಗೂ ಆಫರ್ ಬಂದಿತ್ತು. ಉಸ್ತುವಾರಿ ಸ್ಥಾನ ನೀಡುವದರ ಜೊತೆಗೆ ಮೂವತ್ತು ಕೋಟಿಯ ಆಫರ್ ಬಿಜೆಪಿ ನಾಯಕರು ನೀಡಿದ್ದರು. ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್, ಯಲಹಂಕ ಶಾಸಕ ವಿಶ್ವನಾಥ್ ಹಾಗೂ ಮಾಜಿ ಶಾಸಕ ಅಶ್ವಥ್ ನಾರಾಯಣ ಅವರು ಬೆಂಗಳೂರಿನ ಮನೆಗೆ ಬಂದು ಆಫರ್ ನೀಡಿ ಸೂಟ್‍ಕೇಸ್ ಬಿಟ್ಟುಹೋದ್ರು. ಸೂಟ್‍ಕೇಸ್ ತೆಗೆದಾಗ ಅದರಲ್ಲಿ ಐದು ಕೋಟಿ ಹಣವಿತ್ತು. ಫೋನ್ ಮಾಡಿ ಕೇಳಿದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ 25 ಕೋಟಿ ಕೊಡುತ್ತೀವಿ ಅಂತಾ ಹೇಳಿದರು.

ಹಣದ ಸೂಟ್‍ಕೇಸ್ ಎರಡು ತಿಂಗಳು ನನ್ನ ಮನೆಯಲ್ಲಿತ್ತು. ಈ ಸಂಬಂಧ ಸಿಎಂ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿದಾಗ ಈ ವಿಷಯವನ್ನು ದೊಡ್ಡದು ಮಾಡೋದು ಬೇಡ. ನಿಮ್ಮ ಮನೆಯಲ್ಲಿರುವ ಹಣವನ್ನು ವಾಪಾಸ್ಸು ಕಳುಹಿಸು ಎಂದು ಸೂಚನೆ ನೀಡಿದ್ದರು. ಸಿಎಂ ಸೂಚನೆ ಮೇರೆಗೆ ಹಣವನ್ನು ವಾಪಾಸ್ಸು ಕಳುಹಿಸಿದೆ ಎಂದು ಗೊಂದಲದ ಹೇಳಿಕೆಯನ್ನು ಸಚಿವರು ನೀಡಿದರು. ಸಿಎಂ ಸೂಚನೆಯ ಮೇರೆಗೆ ಫೋನ್ ಮಾಡಿದಾಗ ಅಶ್ವಥ್ ನಾರಾಯಣ್ ಬಂದು ಹಣ ಪಡೆದುಕೊಂಡು ಹೋದ್ರು.

ರಮೇಶ್ ಕುಮಾರ್ ಒಳ್ಳೆಯ ಸ್ಪೀಕರ್. ಒಂದು ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಆ ರೀತಿ ಮಾತನಾಡಿದ್ದರೆ ಅದು ತಪ್ಪು ಎಂದು ಹೇಳಿದ್ರು. ಅಲ್ಲದೇ ರಮೇಶ್ ಕುಮಾರ್ ಅವರು ಅಂತಹ ಕೆಳ ಮಟ್ಟಕ್ಕೆ ಇಳಿಯುವ ರಾಜಕಾರಣಿ ಅಲ್ಲ. ಜೊತೆಗೆ ಅವರು ಡೀಲ್ ಅಗುವಂತಹ ಮನಷ್ಯ ಅಲ್ಲ ಅಂತಾ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *