ಮುಂಬೈ: ವೆಸ್ಟ್ ಇಂಡೀಸ್ ಆಟಗಾರ ಡ್ವೇನ್ ಬ್ರಾವೋ ಕ್ರೀಡಾಂಗಣದಲ್ಲಿ ಎಷ್ಟು ಉತ್ತಮ ಆಟಗಾರನೋ ಅಷ್ಟೇ ಉತ್ತಮ ಹಾಡುಗಾರ ಎಂಬುವುದು ಈ ಹಿಂದೆಯೇ ಸಾಬೀತಾಗಿದೆ. ಸದ್ಯ ಬ್ರಾವೋ ಏಷ್ಯಾ ಕ್ರಿಕೆಟ್ ಆಟಗಾರರ ಮೇಲೆ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ.
ಏಷ್ಯಾದಲ್ಲಿ ಕ್ರಿಕೆಟ್ ಆಡುವ ಪ್ರಮುಖ ರಾಷ್ಟ್ರಗಳನ್ನು ಆಯಾ ದೇಶಗಳ ನೆಚ್ಚಿನ ಆಟಗಾರರ ಜೊತೆ ಗುರುತಿಸಿರುವ ಬ್ರಾವೋ ಭಾರತದಲ್ಲಿ ಧೋನಿ ಹಾಗೂ ಕೊಹ್ಲಿ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಹಾಡಿನ ವಿಡಿಯೋವನ್ನು ಪಾಕಿಸ್ತಾನದ ಆಫ್ರಿದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
https://twitter.com/SAfridiOfficial/status/1093509577830653952
ಏಷ್ಯಾ ಕ್ರಿಕೆಟಿಗರಲ್ಲಿ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕರ, ಮಹೇಲಾ ಜಯವರ್ಧನೆ, ಬಾಂಗ್ಲಾ ತಂಡದ ಶಕೀಬ್, ಪಾಕ್ ಆಫ್ರಿದಿ ಸೇರಿದಂತೆ ನೆಚ್ಚಿನ ಆಟಗಾರರ ಹೆಸರಿನಲ್ಲಿ ಹಾಡು ಬರೆದಿದ್ದಾರೆ. 35 ವರ್ಷದ ಬ್ರಾವೋ 2017ರ ಐಪಿಎಲ್ ನಲ್ಲಿ ಭಾಗವಹಿಸಿದ್ದರು. ಆದರೆ ಈ ವೇಳೆ ಗಾಯದ ಸಮಸ್ಯೆಗೆ ಒಳಗಾಗಿದ್ದ ಬ್ರಾವೋ ಆವೃತ್ತಿ ಅವಧಿಯಲ್ಲಿ ಸಂಗೀತದ ಕಡೆ ಗಮನ ಹರಿಸಿದ್ದರು. ಆ ಬಳಿಕ ಮೈದಾನದಲ್ಲೂ ಹಲವು ಬಾರಿ ಡಾನ್ಸ್ ಮಾಡಿ ಸಂಭ್ರಮಿಸಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದ ಬ್ರಾವೋ ಆ ವೇಳೆಯೇ ಹಾಡೊಂದನ್ನು ಬರೆದು ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದ್ದರು. ಸದ್ಯ ಬಿಡುಗಡೆಯಾಗಿರುವ ಹಾಡು ಒಂದು ನಿಮಿಷ ಅವಧಿ ಇದ್ದು, ಈಗಾಗಲೇ 23 ಸಾವಿರ ವ್ಯೂ ಆಗಿದೆ. ಅಲ್ಲದೇ 5 ಸಾವಿರ ಮಂದಿ ಲೈಕ್ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply