ಸ್ಮಶಾನದಲ್ಲಿ 80 ವರ್ಷದ ವೃದ್ಧೆಯ ಮೇಲೆ ಸಾಮೂಹಿಕ ಅತ್ಯಾಚಾರ

– ಸೆಕ್ಸ್‌ಗೆ ನಿರಾಕರಿಸಿದಕ್ಕೆ ಕಾಮುಕರಿಂದ ಹಲ್ಲೆ, ರಕ್ತಸ್ರಾವದಿಂದ ವೃದ್ಧೆ ಸಾವು

ಬೆಂಗಳೂರು: ಸ್ಮಶಾನದ ಗೇಟ್ ಕಾಯುತ್ತಿದ್ದ 80 ವರ್ಷದ ವೃದ್ಧೆಯ ಮೇಲೆ ಯುವಕ ಹಾಗೂ ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯ ಎನ್‍ಜಿಆರ್ ಲೇಔಟ್‍ನಲ್ಲಿ ನಡೆದಿದೆ.

ಬೊಮ್ಮನಹಳ್ಳಿಯ ಎನ್‍ಜಿಆರ್ ಲೇಔಟ್‍ನ ನಿವಾಸಿ ಯಲ್ಲಮ್ಮ (80) ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆ. ಅತ್ಯಾಚಾರ ಎಸಗಿದ್ದ ಹರೀಶ್‍ನನ್ನು (19) ಬೊಮ್ಮನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಮೃತಪಟ್ಟಿದ್ದಾರೆ.

ಆಗಿದ್ದೇನು?:
ರೂಪೇನ ಅಗ್ರಹಾರದ ಎನ್‍ಜಿಆರ್ ಬಡಾವಣೆಯ ಸ್ಮಶಾನದ ಕಾವಲು ಕಾಯುವ ಕೆಲಸ ಮಾಡುತ್ತಿದ್ದ ಯಲ್ಲಮ್ಮ ಅಲ್ಲಿನ ರೂಮ್ ಒಂದರಲ್ಲಿ ವಾಸವಾಗಿದ್ದರು. ಹರೀಶ್ ಹಾಗೂ ಆತನ ಕೆಲ ಸ್ನೇಹಿತರು ಶನಿವಾರ ಸಂಜೆ ಯಲ್ಲಮ್ಮ ವಾಸವಿದ್ದ ರೂಮ್‍ಗೆ ಹೋಗಿದ್ದಾರೆ. ಈ ವೇಳೆ ವೃದ್ಧೆ ಯಲ್ಲಮ್ಮ ಮುಖಕ್ಕೆ ಕಟ್ಟಿಗೆಯಿಂದ ಹೊಡೆದು, ಎದೆ ಭಾಗವನ್ನು ಕಚ್ಚಿದ್ದಾರೆ. ಅಷ್ಟೇ ಅಲ್ಲದೆ ಗುಪ್ತಾಂಗಕ್ಕೂ ಗಾಯ ಮಾಡಿ ಅತ್ಯಾಚಾರ ಎಸಗಿದ್ದಾರೆ.

ಸ್ಮಶಾನದಲ್ಲಿ ಕುರಿ ಕಟ್ಟಲು ಹೋಗಿದ್ದ ಮಹಿಳೆಯೊಬ್ಬರಿಗೆ ಯಲ್ಲಮ್ಮ ವಾಸವಿದ್ದ ರೂಮ್‍ನಿಂದ ಧ್ವನಿ ಕೇಳಿದೆ. ತಕ್ಷಣವೇ ಅಲ್ಲಗೆ ಹೋಗಿ ಬಾಗಿಲು ತೆರೆಯುತ್ತಿದ್ದಂತೆ ವೃದ್ಧೆ ಯಲ್ಲಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಚೀರಿಕೊಂಡಿದ್ದಾರೆ. ರೂಮ್ ಒಳಗಿದ್ದ ಹರೀಶ್ ಹಾಗೂ ಕೆಲ ಯುವಕರು ಇರುವುದನ್ನು ನೋಡಿ ಗಾಬರಿಯಿಂದ ಓಡಿ ಹೋಗಿ ಸ್ಥಳೀಯರಿಗೆ ಹಾಗೂ ವೃದ್ಧೆಯ ಮಗಳಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳೀಯರು ಘಟನಾ ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಕುರಿತು ಸ್ಥಳೀಯರು ಕರೆ ಮಾಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬೊಮ್ಮನಹಳ್ಳಿ ಠಾಣಾ ಪೊಲೀಸರು ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಮೃತಪಟ್ಟಿದ್ದಾರೆ.

ಈ ಕುರಿತು ಮೃತ ವೃದ್ಧೆಯ ಸಂಬಂಧಿಕರು ಬೊಮ್ಮನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿ ಹರೀಶ್‍ನನ್ನು ವಶಕ್ಕೆ ಪಡೆದು, ಇತರರಿಗಾಗಿ ಶೋಧ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *