ಅನುಕ್ತ: ಥ್ರಿಲ್ಲರ್ ಜಾಡಿನಲ್ಲೂ ಇದೆ ಕ್ಯೂಟ್ ಲವ್ ಸ್ಟೋರಿ!

ಶ್ವತ್ಥ್ ಸ್ಯಾಮುಯಲ್ ನಿರ್ದೇಶನ ಮಾಡಿರೋ ಅನುಕ್ತ ಚಿತ್ರದ ಸುತ್ತ ಹರಡಿಕೊಂಡಿರೋ ಸುದ್ದಿಗಳು, ಆ ಕಾರಣದಿಂದಲೇ ಹುಟ್ಟಿಕೊಂಡಿರೋ ನಿರೀಕ್ಷೆಗಳೇನೂ ಕಡಿಮೆಯಿಲ್ಲ. ಇದೊಂದು ಕರಾವಳಿ ಪ್ರದೇಶದಲ್ಲಿ ಜರುಗೋ ಕ್ರೈಂ ಥ್ರಿಲ್ಲರ್ ಎಂಬುದೂ ಸೇರಿದಂತೆ ಒಂದಷ್ಟು ವಿಚಾರಗಳು ಈಗಾಗಲೇ ಹೊರ ಬಿದ್ದಿವೆ.

ಆದರೆ ಅನುಕ್ತದ ಒಡಲಲ್ಲಿ ಹೇಳದೇ ಉಳಿದ, ಹೇಳಲಾಗದ ಅದೆಷ್ಟೋ ವಿಚಾರಗಳಿದ್ದಾವೆ. ಅನುಕ್ತ ಚಿತ್ರದಲ್ಲಿ ಕರಾವಳಿಯ ಪ್ರದೇಶದಷ್ಟೇ ಫ್ರೆಶ್ ಆದೊಂದು ಕ್ಯೂಟ್ ಲವ್ ಸ್ಟೋರಿಯೂ ಇದೆ. ಇಡೀ ಸಿನಿಮಾದ ಕಥೆ ಎಷ್ಟು ಭಿನ್ನವಾಗಿದೆಯೋ ಈ ಪ್ರೇಮ ಕಥೆಯನ್ನೂ ಅಷ್ಟೇ ವಿಶಿಷ್ಟವಾಗಿ ರೂಪಿಸಲಾಗಿದೆಯಂತೆ. ನಾಯಕ ಕಾರ್ತಿಕ್ ಅತ್ತಾವರ್ ಮತ್ತು ನಾಯಕಿ ಸಂಗೀತಾ ಭಟ್ ಕ್ಯೂಟ್ ಜೋಡಿಗಳಾಗಿ ಎಲ್ಲರೂ ಮುದಗೊಳ್ಳುವಂತೆ ನಟಿಸಿದ್ದಾರೆ.

ಹರೀಶ್ ಬಂಗೇರಾ ನಿರ್ಮಾಣ ಮಾಡಿರೋ ಈ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಈ ಕ್ಯೂಟ್ ಲವ್ ಸ್ಟೋರಿಯೂ ಪ್ರಧಾನ ಪಾತ್ರ ವಹಿಸುತ್ತದೆ. ಒಟ್ಟಾರೆಯಾಗಿ ಸಸ್ಪೆನ್ಸ್ ಥ್ರಿಲ್ಲರ್, ಕಾಮಿಡಿ, ಮಾಸ್ ಮತ್ತು ಪ್ರೀತಿ ಸೇರಿದಂತೆ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ತೃಪ್ತಿ ಪಡಿಸುವಂತೆ ಅನುಕ್ತ ಮೂಡಿ ಬಂದಿದೆ. ಬಿಡುಗಡೆಯ ಹೊಸ್ತಿಲಲ್ಲಿರೋ ಅನುಕ್ತದಲ್ಲಿ ಹೆಸರಿಗೆ ತಕ್ಕಂತೆ ಹೇಳಿಕೊಳ್ಳಲಾಗದ ಅನೇಕ ವಿಚಾರಗಳಿವೆ. ಅದೇನೆಂಬುದು ಬಯಲಾಗಲು ದಿನಗಳಷ್ಟೇ ಬಾಕಿ ಉಳಿದಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *