ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು: ಕಲ್ಪನೆಗೂ ನಿಲುಕದ ಕಥೆ ಇಲ್ಲಿದೆ!

ಬೆಂಗಳೂರು: ಇದೇ ಫೆಬ್ರವರಿ ಒಂದರಂದು ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಎಂಬ ವಿಭಿನ್ನ ಚಿತ್ರವೊಂದು ತೆರೆ ಕಾಣುತ್ತಿದೆ. ಉಳಿಕೆ ಚಿತ್ರಗಳ ಪ್ರಚಾರದ ಭರಾಟೆಯಲ್ಲಿ ಈ ಸಿನಿಮಾ ಕೊಂಚ ಮಂಕಾದಂತೆ ಕಾಣುತ್ತಿರೋದು ಸಹಜವೇ. ಆದರೆ ಇದು ಕನ್ನಡಿಗರು ಕೈ ಹಿಡಿದರೆ ಎಲ್ಲವನ್ನೂ ಥಂಡಾ ಹೊಡೆಸಿ ಬಿಡುವಂಥಾ ಕಲ್ಪನೆಗೂ ನಿಲುಕದ ಕಥೆಯೊಂದನ್ನು ಹೊಂದಿರೋ ಗಟ್ಟಿ ಚಿತ್ರ!

ಲೋಕೇಂದ್ರ ಸೂರ್ಯ ಎಂಬ ಆರ್ಕೆಸ್ಟ್ರಾ ಹುಡುಗ ಈ ಸಿನಿಮಾವನ್ನ ನಿರ್ದೇಶನ ಮಾಡಿ ತಾವೇ ಮುಖ್ಯ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಟೈಟಲ್ಲು ಕೇಳಿದರೆ ಇದು ಕಲಾತ್ಮಕ ಚಿತ್ರವೆಂಬಂತೆ ಕಾಣಿಸೋದು ನಿಜ. ಆದರಿದು ಹೊಸಾ ಹಾದಿಯಲ್ಲಿ ರೂಪುಗೊಂಡಿರೋ ಕಮರ್ಶಿಯಲ್ ಚಿತ್ರ. ಪ್ರತಿ ಕ್ಷಣವೂ ನೋಡಿಸಿಕೊಂಡು ಹೋಗೋ ಗುಣವೂ ಸೇರಿದಂತೆ ಯಾವುದರಲ್ಲಿಯೂ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಸಿನಿಮಾ ಕಮರ್ಶಿಯಲ್ ಚಿತ್ರಗಳಿಗೆ ಕಮ್ಮಿಯಾಗಿಲ್ಲ.

ಕನ್ನಡ ಚಿತ್ರರಂಗ ಮಾತ್ರವಲ್ಲ, ಎಲ್ಲ ಭಾಷೆಗಳಿಗೂ ಹೊಸತಾದ ಕಥೆ ಹೊಂದಿರೋ ಈ ಸಿನಿಮಾ ಹೇಳಿಕೊಳ್ಳುವಂಥಾ ಪ್ರಚಾರಕ್ಕೆ ಪಾತ್ರವಾಗುತ್ತಿಲ್ಲ. ಈ ಸಿನಿಮಾವನ್ನು ಲೋಕೇಂದ್ರ ಸೂರ್ಯ ಭಾರೀ ಶ್ರಮ ವಹಿಸಿ ಅಚ್ಚುಕಟ್ಟಾಗಿ ರೂಪಿಸಿದ್ದಾರೆ. ಆದರೆ ಗಾಂಧಿನಗರದ ಸಿದ್ಧಸೂತ್ರಗಳಿಗೆ ಸರಿಸಾಟಿಯಾಗಿ ಪ್ರಚಾರ ಮಾಡುವಷ್ಟು ಹಣಕಾಸಿನ ಬೆಂಬಲ ಈ ಸಿನಿಮಾಕ್ಕಿಲ್ಲ ಅನ್ನೋದೇ ಪ್ರಚಾರದ ಕೊರತೆಯಾಗಿ ಕಾಡುತ್ತಿದೆ.

ಆದರೆ ಈ ಸಿನಿಮಾವನ್ನ ಕನ್ನಡಿಗರೆಲ್ಲರೂ ನೋಡಲೇ ಬೇಕಿದೆ. ಯಾಕೆಂದರೆ ಇದರಲ್ಲಿ ಕಲ್ಪನೆಗೂ ಮೀರಿದ ಕಥೆಯಿದೆ. ನೋಡಿ ಗೆಲ್ಲಿಸಿದರೆ ಒಂದೊಳ್ಳೆ ಚಿತ್ರ ಗೆದ್ದಂತಾಗುತ್ತೆ. ಹಾಗಾದರೆ ಕನ್ನಡ ಚಿತ್ರರಂಗಕ್ಕೇ ಕಳಶಪ್ರಾಯವೆಂಬಂಥಾ ಒಂದಷ್ಟು ಹೊಸಾ ಪ್ರಯತ್ನಗಳಿಗೆ ಉತ್ತೇಜನ ಸಿಕ್ಕಂತಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *