ಕುಮಾರಣ್ಣನ ಆರು ನಾಟಕಗಳನ್ನು ತಿಳಿಸಿ ಬಿಜೆಪಿ ವ್ಯಂಗ್ಯ

ಬೆಂಗಳೂರು: ಸಿಎಂ ಕುಮಾರಸ್ವಾಮಿ ನಾನು ರಾಜೀನಾಮೆಗೆ ಸಿದ್ಧ ಎಂದು ಹೇಳುವ ಮೂಲಕ ಕಾಂಗ್ರೆಸ್ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕುರುಬರ ಸಂಘದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ ಜೆಡಿಎಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಈ ಹೇಳಿಕೆಗಳ ಬೆನ್ನಲ್ಲೆ ಸಿಎಂ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ ಎನ್ನಲಾಗ್ತಿದೆ. ಸಿಎಂ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಬಿಜೆಪಿ ನಾಯಕರು ಸಾಲು ಸಾಲು ಟ್ವೀಟ್ ಮೂಲಕ ವ್ಯಂಗ್ಯ ಮಾಡಲಾರಂಭಿಸಿದ್ದಾರೆ.

ಕರ್ನಾಟಕ ಬಿಜೆಪಿ ಟ್ವಿಟ್ಟರ್ ಖಾತೆಯಲ್ಲಿ ಸಿಎಂ ಕುಮಾರಸ್ವಾಮಿ ಕಥೆ, ನಿರ್ಮಾಣ ಮತ್ತು ನಿರ್ದೇಶನದ ಆರು ನಾಟಕಗಳು.
ಸ್ಕ್ರಿಪ್ಟ್ 1: ನಾನು ವಿಷಕಂಠ, ಸ್ಕ್ರಿಪ್ಟ್ 2: ನಾನು ಕ್ಲರ್ಕ್ ರೀತಿ ಕೆಲಸ ಮಾಡುತ್ತಿದ್ದೇನೆ. ಸ್ಕ್ರಿಪ್ಟ್ 3: ಸಾವಿನ ಅಂಚಿನಲ್ಲಿದ್ದೇನೆ ಸ್ಕ್ರಿಪ್ಟ್ 4. ಸಿಂಗಾಪೂರನಲ್ಲಿ ಹೊಸ ವರ್ಷದ ಪಾರ್ಟಿ ಸ್ಕ್ರಿಪ್ಟ್ 5: ಸೀತಾರಾಮಕಲ್ಯಾಣ ಸಿನಿಮಾ ನೋಡಿದ್ದು ಸ್ಕ್ರಿಪ್ಟ್ 6: ರಾಜೀನಾಮೆ ನೀಡ್ತೀನಿ ಎಂದು ಬರೆದುಕೊಂಡು ಕುಮಾರಸ್ವಾಮಿ ಅವರಿಗೆ ಟ್ಯಾಗ್ ಮಾಡಲಾಗಿದೆ.

ಸಿಎಂ ಹೇಳಿದ್ದೇನು?
ನನ್ನ ಕೆಲಸದ ವೈಖರಿಯಿಂದ ಯಾರಿಗಾದರೂ ಇಷ್ಟವಾಗದಿದ್ರೆ ನಾನು ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ಕುರ್ಚಿಗೆ ಅಂಟಿಕೊಂಡು ಕೂರುವಂತಹ ಮನುಷ್ಯ ನಾನಲ್ಲ. ಒಳ್ಳೆಯ ಆಡಳಿತ ನೀಡೋದಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆ ಮಾಡಲಾಗಿದೆ. ನಾನು ಡಿಸಿಎಂ ಮತ್ತು ಸಂಪುಟದ ಕೆಲ ಸಚಿವರು ಉತ್ತಮ ಕೆಲಸ ಮಾಡುತ್ತಿದ್ದೇವೆ. ನಾವು ಒಳ್ಳೆಯ ಆಡಳಿತ ನೀಡುತ್ತಿದ್ದೇವೆ, ನಾವು ಜೊತೆಯಲ್ಲೇ ಕೆಲಸ ಮಾಡುತ್ತಿದ್ದೇವೆ. ನಮ್ಮ ಹಾಗೂ ಡಿಸಿಎಂ ನಡುವೆ ಒಳ್ಳೆಯ ಸಂಬಂಧವಿದ್ದು, ಜೊತೆಗೆ ಎಲ್ಲಾ ಶಾಸಕರ ಸಹಕಾರ ಬೇಕಾಗಿದೆ.

https://www.youtube.com/watch?v=y0M9aSr3tVM

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *