ಒಬ್ಬ ರೈತನ ಮಗನಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದು ಸಂತಸ ನೀಡಿದೆ: ಶಶಿಕುಮಾರ್ ತಾಯಿ

ಬೆಂಗಳೂರು: ಒಬ್ಬ ರೈತನ ಮಗನಾಗಿ ಬಿಗ್ ಬಾಸ್‍ನಲ್ಲಿ ಭಾಗವಹಿಸಿದ್ದು, ನನಗೆ ಹೆಚ್ಚು ಸಂತಸ ತಂದಿದೆ. ಸ್ಪರ್ಧೆಯಲ್ಲಿ ಫೈನಲ್ ಪ್ರವೇಶ ಮಾಡಿದ್ದು ಮತ್ತಷ್ಟು ಖುಷಿ ನೀಡಿದ್ದು, ಒಬ್ಬ ಆಧುನಿಕ ರೈತನಾಗಿ ನಾಡಿನ ಜನರ ಪ್ರೀತಿ ಪಡೆದಿದ್ದಾರೆ ಎಂದು ಬಿಗ್‍ಬಾಸ್ ಸ್ಪರ್ಧಿ ಶಶಿಕುಮಾರ್ ಅವರ ತಾಯಿ ಪದ್ಮ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸ್ಪರ್ಧೆಯಲ್ಲಿ ಫೈನಲ್ ವರೆಗೂ ಬರಲು ಆತನ ಸ್ಟ್ರೈಟ್ ಫಾವರ್ಡ್ ನಡೆಯೇ ಕಾರಣ. ಬಿಗ್‍ಬಾಸ್ ಹೋಗುವ ಮುನ್ನ ಹೇಗಿದ್ದನೋ ಕಾರ್ಯಕ್ರಮದಲ್ಲೂ ತನ್ನ ತನವನ್ನು ಉಳಿಸಿಕೊಂಡು ಬಂದಿದ್ದಾನೆ. ಅವನಿಗೆ ಅವನ ಮೇಲೆ ಇರುವ ನಂಬಿಕೆಯೇ ಶಕ್ತಿ ಎಂದರು.

ಪ್ರತಿದಿನ ಕಾರ್ಯಕ್ರಮವನ್ನು ನೋಡುತ್ತಿದ್ದು, ವಿಷ ಸರ್ಪ ಹಾಗೂ ಸಿನಿಮಾ ನಿರ್ದೇಶನ ಮಾಡಿದ ಆಟಗಳು ನನಗೆ ತುಂಬಾ ಇಷ್ಟ ಆಯ್ತು. ಆತನನ್ನು ಭೇಟಿ ಆಗಿ 3 ತಿಂಗಳು ಆಗಿದೆ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದು, ಆತನ ಸಹಾಯ ಮಾಡುವ ಗುಣವೇ ಆತನನ್ನು ಇಲ್ಲಿಯವರೆಗೂ ಕರೆದುಕೊಂಡು ಹೋಗಿದೆ. ನಾಡಿನ ಅಷ್ಟು ಮಂದಿ ತನ್ನ ಮಗನಿಗೆ ಬೆಂಬಲ ನೀಡಿದ್ದು, ಅದು ಹಾಗೆಯೇ ಮುಂದುವರಿಯಲಿ ಎಂದು ಮನವಿ ಮಾಡಿದರು.

ಮಗ ಬಿಗ್‍ಬಾಸ್ ಆಯ್ಕೆ ಆಗಿದ್ದು ಮೊದಲಿಗೆ ನನಗೆ ಖುಷಿ ತಂದಿದ್ದು, ಆತ ಶಿಕ್ಷಣ ಪಡೆಯುತ್ತಿರುವ ವೇಳೆಯೇ ರೈತನಾಗಿ ಮಾಡಿದ ಕಾರ್ಯಗಳು ನನಗೆ ಮೆಚ್ಚುಗೆ ಇತ್ತು. ಯಾರೇ ಕೃಷಿ ಬಗ್ಗೆ ಮಾಹಿತಿ ಕೇಳಿದ್ರು ತಪ್ಪದೇ ಕೊಡುತ್ತಿದ್ದ. ಬಿಗ್‍ಬಾಸ್ ಶೋ ಸ್ಪರ್ಧೆಯಲ್ಲಿ ಒಬ್ಬ ರೈತ ಯುವಕನಿಗೆ ಅವಕಾಶ ನೀಡುತ್ತಾರೆ ಎಂಬ ಊಹೆಯೂ ನನಗೆ ಇರಲಿಲ್ಲ. ರಾಮನಗರದಲ್ಲಿ ಫಾರ್ಮಿಂಗ್ ಮಾಡುತ್ತಿದ್ದ ಮಗ 3 ತಿಂಗಳಿನಿಂದ ನಮ್ಮೊಂದಿಗೆ ಇಲ್ಲದಿರುವುದು ಮತ್ತೊಂದೆಡೆ ತುಂಬಾ ಬೇಸರ ತಂದಿದೆ. ಆದ್ರೆ ಆತನ ಪ್ರಯತ್ನಗಳು ಈ ನಾಡಿಗೆ ಈ ಮೂಲಕ ತಿಳಿಯಿತು. ಇಷ್ಟು ದಿನ ಶಶಿಕುಮಾರ್ ಗೆ ಬೆಂಬಲ ನಿಂತ ಕನ್ನಡಿಗರಿಗೆ ವಂದನೆ ಎಂದು ಶಶಿಕುಮಾರ್ ತಂದೆ ಶ್ರೀರಾಮ್ ರೆಡ್ಡಿ ಅವರು ತಿಳಿಸಿದರು.

ಶಶಿಕುಮಾರ್ ಭಾವ ಹರೀಶ್ ಹಾಗೂ ಸತೀಶ್ ಗೌಡ ಮಾತನಾಡಿ, 6 ಆವೃತ್ತಿಗಳಿಂದ ಬಿಗ್‍ಬಾಸ್ ನೀಡುತ್ತಿದ್ದ ಮನರಂಜನೆ ಈ ಬಾರಿ ಡಬಲ್ ಆಗಿದ್ದು, ಒಬ್ಬ ರೈತ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಬಲ್ಲ ಎಂಬುದು ಶಶಿ ಅವರಿಂದ ನಿಜವಾಗಿದೆ. ವಿವಿಧ ಕ್ಷೇತ್ರದಲ್ಲಿ ಶಶಿ ಅವರು ಗಳಿಸಿರುವ ಜ್ಞಾನವೇ ಅವರನ್ನು ಪ್ರಬಲ ಸ್ಪರ್ಧಿಯಾಗಿ ನಿಲ್ಲಿಸಿದೆ. ಬೇರೆ ಸ್ಪರ್ಧಿಗಳ ಬಗ್ಗೆ ಹಿಂದೆ, ಮುಂದೆ ಒಂದು ರೀತಿ ಮಾತನಾಡದೇ ಇರುವುದು ಆತನ ಪ್ಲಸ್ ಪಾಯಿಂಟ್. ಇದುವರೆಗೂ ಸ್ಪರ್ಧೆಯಲ್ಲಿ ಆತ ಜೈಲಿಗೆ ಹೋಗದಿರುವುದು ಅವರ ಸಾಮರ್ಥ್ಯಕ್ಕೆ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *