ಭರ್ಜರಿ ಆರಂಭದೊಂದಿಗೆ 2ನೇ ದಿನಕ್ಕೆ ಕಾಲಿಟ್ಟಿದೆ ಪಬ್ಲಿಕ್ ಟಿವಿ ಫುಡ್ ಫೆಸ್ಟಿವಲ್

ಬೆಂಗಳೂರು: ಇದೇ ಮೊದಲ ಬಾರಿಗೆ ಆಹಾರ ಪ್ರಿಯರಿಗೆ ಪಬ್ಲಿಕ್ ಟಿವಿ ಆಹಾರ ಮೇಳವನ್ನ ಆಯೋಜಿಸಿದ್ದು, ಶನಿವಾರದಿಂದ ಶುರುವಾಗಿರೋ ಈ ಫುಡ್ ಫೆಸ್ಟಿವಲ್‍ಗೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪುಡ್ ಫೆಸ್ಟ್ ನಡೆಯುತ್ತಿದ್ದು, ಇಂದು ಬೆಳಗ್ಗೆ 10 ರಿಂದ ರಾತ್ರಿ 10 ರ ವರೆಗೆ ಫುಡ್ ಫೆಸ್ಟಿವಲ್ ಅದ್ಧೂರಿಯಾಗಿ ನಡೆಯಲಿದೆ.

ದಿನಾಲೂ ಮನೆಯಲ್ಲಿ ಅಡುಗೆ ಮಾಡೋದು ಇರುತ್ತೆ. ವೀಕೆಂಡ್ ನಲ್ಲಿ ಎಲ್ಲಾದರೂ ಹೊರಗಡೆ ಹೋಗೋಣ ಅನ್ನೋದು ಪ್ರತಿಮನೆಯಲ್ಲೂ ಕಾಮನ್ ಆಗಿ ಕೇಳಿಬರುವ ಡೈಲಾಗ್. ಆದರಿಂದ ಬೇರೆ ಎಲ್ಲೋ ಹೋಗಿ ಊಟ ಮಾಡೋ ಬದಲು ಪಬ್ಲಿಕ್ ಟಿವಿ ಆಯೋಜಿಸಿರುವ ಫುಡ್ ಫೆಸ್ಟಿವಲ್‍ಗೆ ಬಂದು ನಿಮಗೆ ಇಷ್ಟವಾಗುವ ವಿಧವಿಧವಾದ ಖಾದ್ಯಗಳನ್ನು ಸವಿದು ಆನಂದಿಸಿ.

ಈ ವಿಶೇಷ ಫುಡ್ ಫೆಸ್ಟಿವಲ್‍ನಲ್ಲಿ ಬಿಸಿ ಬಿಸಿಯಾದ ಮಟನ್, ಚಿಕನ್ ಬಿರಿಯಾನಿ, ನೀರುಣಿಸೋ ಕೆಂಪು ಕೆಂಪಾದ ಬಾಂಗಡಾ, ಅಂಜಲ್ ಹೀಗೆ ವೆರೈಟಿ ವೆರೈಟಿ ಫಿಶ್ ಐಟೆಮ್ಸ್, ನಾಟಿ ಕೋಳಿ ಐಟಮ್ಸ್ ಮಾಂಸಾಹಾರಿಗಳನ್ನ ಕೈಬಿಸಿ ಕರೆಯುತ್ತಿದ್ದರೇ, ಮತ್ತೊಂದೆಡೆ ಗರಿ ಗರಿಯಾದ ದೋಸೆ, ವೆರೈಟಿ ವೆರೈಟಿ ಹೋಳಿಗೆ ಜೊತೆಗೆ ಖಡಕ್ ರೊಟ್ಟಿ, ಎಣ್ಣೆಗಾಯಿ ಪಲ್ಯ, ಪಲಾವ್, ಪುಳಿಯೋಗರೆ ಸೇರಿದಂತೆ ವಿವಿಧ ಭಕ್ಷ್ಯಗಳು ನಿಮ್ಮನ್ನ ಆಹಾರದ ಹೊಸಲೋಕಕ್ಕೆ ಕರೆದುಕೊಂಡು ಹೋಗುತ್ತದೆ.

ಮೊದಲ ದಿನವೇ ಫುಡ್ ಫೆಸ್ಟಿವಲ್‍ಗೆ ಜನರು ಸಖತ್ ಒಳ್ಳೆಯ ರೆಸ್ಪಾನ್ಸ್ ನೀಡಿದ್ದು, ನಿನ್ನೆ ಸಾವಿರಾರು ಜನ ವಿಧವಿಧವಾದ ಖಾದ್ಯಗಳನ್ನು ಸವಿದು ಫುಲ್ ಖುಷ್ ಆಗಿದ್ದಾರೆ. ಅಷ್ಟೇ ಅಲ್ಲದೆ ಫುಡ್ ಫೆಸ್ಟಿವಲ್‍ಗೆ ಎಲ್ಲರಿಗೂ ಉಚಿತ ಪ್ರವೇಶವಿದ್ದು ಪ್ರತಿ ಅರ್ಧ ಗಂಟೆಗೆ ಒಬ್ಬರಿಗೆ ಲಕ್ಕಿ ಡ್ರಿಪ್ ಮೂಲಕ ಆಕರ್ಷಕ ಬಹುಮಾನ ಕೂಡ ಕೊಡಲಾಗುತ್ತದೆ.

ಆಹಾರ ಪ್ರಿಯರು ಹಳೇ ಅಡ್ಡಾಕ್ಕೆ ಹೋಗಿ, ಅದೇ ಮೆನು ಹಿಡಿದುಕೊಳ್ಳೋ ಬದಲು, ಇಲ್ಲೊಮ್ಮೆ ಎಂಟ್ರಿ ಕೊಡಿ. ಒಂದೇ ಸೂರಿನಡಿಯಲ್ಲಿ 40ಕ್ಕೂ ಹೆಚ್ಚು ಮಳಿಗೆಗಳು 200ಕ್ಕೂ ಹೆಚ್ವು ಬಗೆ ಬಗೆಯ ಖಾದ್ಯಗಳು ಇಲ್ಲಿ ಸಿಗುತ್ತೆ. ಮಿಸ್ ಮಾಡ್ದೆ ಬನ್ನಿ , ವೀಕ್ ಎಂಡ್‍ನ ಫುಡ್ ಫೆಸ್ಟಿವಲ್ ಜೊತೆ ಎಂಜಾಯ್ ಮಾಡಿ.

https://www.youtube.com/watch?v=4MiK-uaB4CQ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *