ಹುಟ್ಟುಹಬ್ಬದಂದೇ ಅಜಯ್ ರಾವ್ ವಿರುದ್ಧ ಆಕ್ರೋಶ..!

ಬೆಂಗಳೂರು: ಹುಟ್ಟುಹಬ್ಬದ ದಿನವೇ ಸ್ಯಾಂಡಲ್‍ವುಡ್ ನಟ ಅಜಯರಾವ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಪೊಲೀಸ್ ಅಧಿಕಾರಿಯಾಗಿ ಬರೀ ಮೈಯಲ್ಲಿ ಶ್ರೀಕೃಷ್ಣನ ಅವತಾರದಲ್ಲಿರುವ ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಜಯ್ ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ ಜಾಲತಾಣಿಗರು ನಟನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಬ್ಲಿಸಿಟಿಗಾಗಿ ದೇವರನ್ನು ಅವಹೇಳನಕಾರಿ ಬಳಕೆ ಮಾಡಿ, ಶ್ರೀಕೃಷ್ಣನಿಗೆ ಅವಮಾನ ಮಾಡಲಾಗ್ತಿದೆ. ಕೂಡಲೇ ಸಾಮಾಜಿಕ ಜಾಲತಾಣದಿಂದ ಪೋಸ್ಟರ್ ಡಿಲೀಟ್ ಮಾಡುವಂತೆ ತಾಕೀತು ಮಾಡಲಾಗಿದೆ. ಇದನ್ನೂ ಓದಿ:

ಪೋಸ್ಟರ್ ಏನು..?
ಹುಟ್ಟುಹಬ್ಬದ ಸಂದರ್ಭದಲ್ಲಿರದ್ದ ಅಜಯ್ ರಾವ್ ಗೆ ಉಡುಗೊರೆ ಎಂಬಂತೆ ಗುರು ದೇಶ್ ಪಾಂಡೆ ಪ್ರೊಡಕ್ಷನ್ ನಿಂದ ನಿರ್ಮಾಣವಾಗಲಿರುವ 27ನೇ ಹೊಸ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿತ್ತು. ಜಿ ಸಿನಿಮಾ ಸಂಸ್ಥೆಯಿಂದ ಅಜಯ್ ಅವರ 27ನೇ ಸಿನಿಮಾ ತಯಾರಾಗುತ್ತಿದ್ದು, ಹುಟ್ಟುಹಬ್ಬದ ದಿನವೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಹಾರೈಸಿದೆ. ಈ ಪೋಸ್ಟರ್ ಅನ್ನು ಅಜಯ್ ತಮ್ಮ ಸಾಮಾಜಿಕ ಮಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.

ಗುರು ದೇಶ್ ಪಾಂಡೆ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ. ರಾಜವರ್ಧನ್ ಶಂಕರ್ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆ ಗುರು ದೇಶಪಾಂಡೆ, ಜಡೇಶ್ ಕುಮಾರ್ ಮತ್ತು ರಾಜವರ್ಧನ್ ಶಂಕರ್ ಅವರದ್ದಾಗಿದೆ. ಅಜಯ್ ಸಿನಿಮಾಕ್ಕೆ ಆರೂರ್ ಸುಧಾಕರ್ ಶೆಟ್ಟಿ ಸಿನಿಮಾಟೋಗ್ರಾಫರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ.


ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *