ಮೈಸೂರು: ಅವಳಿ ಮಕ್ಕಳನ್ನು ಕೊಂದು ತಾಯಿ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಮೈಸೂರಿನ ಬಂಡಿಪಾಳ್ಯದಲ್ಲಿ ನಡೆದಿದೆ.
ಆಶಾ(30), ಅವಳಿ ಮಕ್ಕಳಾದ ಶೌರ್ಯಗೌಡ(8), ಸುಪ್ರೀತ್ ಗೌಡ(8) ಮೃತ ದುರ್ದೈವಿಗಳು. ಆಶಾ ತನ್ನ ಮಕ್ಕಳಿಗೆ ವಿಷ ಕೊಟ್ಟು ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ತದನಂತರ ಆಕೆ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಶಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ನೋಟ್ ಬರೆದಿದ್ದಳು.
ಆಶಾ ತನ್ನ ಡೆತ್ನೋಟ್ನಲ್ಲಿ, “ನನ್ನ ಸಾವಿಗೆ ನಾನೇ ಕಾರಣ. ನನ್ನ ಕುಟುಂಬಕ್ಕೆ ನನ್ನಿಂದ ಅವಮಾನ ಆಗಿದೆ. ನಾನು ಇದರಿಂದ ದಿನ ಕೊರಗಿ ಸಾಯುವ ಬದಲು ಒಂದೇ ಸಾರಿ ಸಾಯಲು ನಿರ್ಧರಿಸಿದ್ದೇನೆ. ನಾನು ಸತ್ತ ಮೇಲೆ ನನ್ನ ಮಕ್ಕಳು ತಬ್ಬಲಿ ಆಗುತ್ತಾರೆ ಎಂದು ನಾನೇ ಅವರನ್ನು ಕೊಂದಿದ್ದೇನೆ. ಮೂವರನ್ನು ಒಟ್ಟಿಗೆ ಚಿತೆಯಲ್ಲಿ ಸುಟ್ಟು ಹಾಕಿ” ಎಂದು ಮನವಿ ಮಾಡಿಕೊಂಡಿದ್ದಾಳೆ.
ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply