ವಿಚ್ಛೇದನಕ್ಕೆ ಕಾರಣವಾಯ್ತು ಪತ್ನಿಯ ಸೆಲ್ಫಿ ಕ್ರೇಜ್!

ಭೋಪಾಲ್: ಪತ್ನಿಯ ಸೆಲ್ಫಿ ಕ್ರೇಜ್‍ಗೆ ಬೇಸತ್ತ ಪತಿ ವಿಚ್ಛೇದನ ಕೊಡಿಸಿ ಅಂತ ಕೋರ್ಟ್ ಮೆಟ್ಟಿಲೇರಿದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಹೌದು, ಈ ಸುದ್ದಿ ಕೇಳಿದರೆ ಆಶ್ಚರ್ಯ ಆಗಬಹುದು ಆದ್ರೆ ಇದು ನಿಜ. ಮದುವೆ ಆದಾಗಿನಿಂದ ನನ್ನನ್ನು ಲೆಕ್ಕಿಸದೇ ಯಾವಾಗಲು ಮೊಬೈಲ್‍ನಲ್ಲಿಯೇ ಪತ್ನಿ ಮುಳುಗಿರುತ್ತಾಳೆ. ಯಾವಾಗಲು ಸೆಲ್ಫಿ ಕ್ಲಿಕ್ಕಿಸಿಕೊಂಡು ಇರುತ್ತಾಳೆ. ಪತ್ನಿ ಮೊಬೈಲ್ ಲೋಕದಲ್ಲಿ ಮುಳುಗಿ ಸಂಸಾರವನ್ನೇ ಮರೆತಿದ್ದಾಳೆ ಅಂತ ಮನನೊಂದ ಪತಿ ವಿಚ್ಛೇದನ ಕೊಡಿಸಿ ಅಂತ ಕೋರ್ಟ್ ಮೆಟ್ಟಿಲೇರಿದ್ದಾನೆ.

ಈ ವಿಚಾರವಾಗಿ ಯಾವಾಗಲು ದಂಪತಿ ನಡುವೆ ಜಗಳ ನಡೆಯುತ್ತಲೇ ಇತ್ತು. ಇದು ಸದ್ಯ ವಿಚ್ಛೇದನದ ತನಕ ಬಂದು ನಿಂತಿದೆ. ವಿಚಾರಣೆ ವೇಳೆ ಪತ್ನಿಗೆ ಮೊಬೈಲ್ ಹುಚ್ಚು, ನನಗೆ ಊಟ ಕೂಡ ಬಡಿಸಲು ಅವಳಿಗೆ ಸಮಯ ಇರಲ್ಲ, ಯಾವಾಗಲೂ ಸೆಲ್ಫಿ ತೆಗೆದುಕೊಳ್ಳುವುದೇ ಕೆಲಸ. ಅವಳೊಟ್ಟಿಗೆ ಸಂಸಾರ ಮಾಡಲು ಆಗಲ್ಲ ಎಂದು ಒಂದೆಡೆ ಪತಿ ಹೇಳಿದರೆ, ಇನ್ನೊಂದೆಡೆ ಮಹಿಳೆ ಪತಿ ನನ್ನ ಬಳಿ ಇದ್ದ ಮೊಬೈಲ್ ಕಸಿದುಕೊಂಡು ಕಿಪ್ಯಾಡ್ ಫೋನ್ ಕೊಟ್ಟಿದ್ದಾನೆ ಅಂತ ಆರೋಪಿಸಿದ್ದಾರೆ.

ಈ ಹಿಂದೆ ಗುರುಗ್ರಾಮದಲ್ಲಿ ಪತ್ನಿ ಮೊಬೈಲ್ ಕ್ರೇಜ್‍ಗೆ ಬೆಸತ್ತ ಪತಿ ಕೊಲೆ ಮಾಡಿದ ಪ್ರಕರಣ ದಾಖಲಾಗಿತ್ತು. ತನ್ನ ಪತ್ನಿ ಮೊಬೈಲ್‍ನಲ್ಲಿ ಮುಳುಗಿರುತ್ತಾಳೆ ಅಂತ ಕೊಲೆ ಮಾಡಿ ಕೊನೆಗೆ ಆತನೇ ಪೊಲೀಸರಿಗೆ ಶರಣಾಗಿದ್ದ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *