ರಾಖಿ ಪ್ರಿಯತಮನ ಮೇಲೆ ಲೈವ್ ಮಾಡಿ ಹಲ್ಲೆ

– ಇದೊಂದು ಪಬ್ಲಿಸಿಟಿ ಗಿಮಿಕ್ ಅಂದ ಡ್ರಾಮಾ ಕ್ವೀನ್

ನವದೆಹಲಿ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮಾಜಿ ಪ್ರಿಯಕರ, ಕಾಮಿಡಿಯನ್ ದೀಪಕ್ ಕಲಾಲ್ ಮೇಲೆ ಕೆಲವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಹಲ್ಲೆಕಾರರು ಲೈವ್ ಮಾಡಿ ಹಲ್ಲೆ ನಡೆಸಿದ್ದಾರೆ. ಹರಿಯಾಣದ ಗುರುಗ್ರಾಮದ ಬಳಿಯಲ್ಲಿ ಈ ಘಟನೆ ನಡೆದಿದ್ದು, ಗಾಯಕ ಫಾಜಿಲಪುರಿಯಾ ಅವರ ಮ್ಯಾನೇಜರ್ ನಿಂದಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಹಲ್ಲೆ ನಡೆದಿದ್ದು ಯಾಕೆ?
ದೀಪಕ್ ಕಲಾಲ್ ಸಾಮಾಜಿಕ ಜಾಲತಾಣದಲ್ಲಿ ಚಿತ್ರ ವಿಚಿತ್ರ ವಿಡಿಯೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಿರುತ್ತಾರೆ. ಈ ವಿಡಿಯೋಗಳಿಗೆ ನೆಟ್ಟಿಗರು ಆಕ್ರೋಶ ಹೊರಹಾಕುವುದು ಸಾಮನ್ಯವಾಗಿರುತ್ತೆ. ಇತ್ತೀಚೆಗೆ ನೊಯ್ಡಾಗೆ ತೆರಳಿದ್ದ ದೀಪಕ್ ನಗರದ ಪಾರ್ಕಿಂಗ್ ನಲ್ಲಿ ಮೂತ್ರ ವಿಸರ್ಜನೆ ಮಾಡಿರುವ ವಿಡಿಯೋವನ್ನು ಇನ್ಸ್ಟಾದಲ್ಲಿ ಅಪ್ಲೋಡ್ ಮಾಡಿಕೊಂಡು, ಮರಗಳಿಗೆ ನೀರು ಹಾಕುತ್ತಿದ್ದೇನೆ ಅಂತಾ ಹೇಳಿದ್ದರು. ನೊಯ್ಡಾದಿಂದ ಹಿಂದಿರುಗುತ್ತಿದ್ದ ವೇಳೆ ಫಾಜಿಲಪುರಿಯಾ ಮ್ಯಾನೇಜರ್ ತನ್ನ ಗೆಳೆಯರೊಂದಿಗೆ ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೈದಿದ್ದಾರೆ.

ದೀಪಕ್ ಮೇಲಿನ ಹಲ್ಲೆ ಕುರಿತು ಪ್ರತಿಕ್ರಿಯಿಸಿರುವ ರಾಖಿ ಸಾವಂತ್, ವಿಷಯ ತಿಳಿದಾಗ ತುಂಬಾನೇ ನೋವಾಯ್ತು. ಆ ವ್ಯಕ್ತಿ ಹಲ್ಲೆ ಮಾಡಿದ್ದು ತಪ್ಪು. ದೆಹಲಿ ಅಲ್ಲಿದ್ದವನನ್ನು ಯಾರು ಎಳೆದುಕೊಂಡು ಹೋಗಿ ಹೊಡೆದ್ರೋ ನನಗೆ ಗೊತ್ತಿಲ್ಲ. ತನ್ನ ಚೇಷ್ಠೆಗಳಿಂದ ಹಲ್ಲೆಗೆ ಒಳಗಾಗಿರುತ್ತಾನೆ. ದೀಪಕ್ ಪ್ರಚಾರಕ್ಕಾಗಿ ಈ ರೀತಿ ವಿಡಿಯೋಗಳನ್ನು ಮಾಡಿರುವ ಸಾಧ್ಯತೆಗಳಿವೆ. ಆತನೋರ್ವ ನಂಬಿಕೆಗೆ ಅನರ್ಹವಾದ ವ್ಯಕ್ತಿ ಅಂತಾ ಹೇಳಿದ್ದಾರೆ.

ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ದೀಪಿಕಾ ಹಾಗು ಪ್ರಿಯಾಂಕ ಚೋಪ್ರಾ ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದರು. ಎಲ್ಲರು ಮದುವೆ ಆಗುತ್ತಿದ್ದು, ನಾನು ದೀಪಕ್ ಕಲಾಲ್ ಎಂಬ ವ್ಯಕ್ತಿಯನ್ನು ವರಿಸಲಿದ್ದೇನೆ ಎಂದು ರಾಖಿ ಸಾವಂತ್ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದರು. ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದ ಜೋಡಿ ಮದ್ವೆಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ ಎಂದು ಕಾಗೆ ಹಾರಿಸಿದ್ದರು. ಕೆಲ ದಿನಗಳ ಬಳಿಕ ರಾಖಿ ಸಾವಂತ್ ಇನ್ಸ್ಟಾದಲ್ಲಿ ವಿಡಿಯೋ ಹಾಕಿಕೊಂಡು, ದೀಪಕ್ ನಡವಳಿಕೆ ಸರಿಯಾಗಿಲ್ಲ. ಸಾರ್ವಜನಿಕವಾಗಿ ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಾನೆ. ಭಾರತೀಯ ಹೆಣ್ಣಾದ ನನಗೆ ದೀಪಕ್ ವರ್ತನೆ ಸರಿಹೋಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾವಿಬ್ಬರು ಬ್ರೇಕಪ್ ಮಾಡಿಕೊಳ್ಳುತ್ತಿದ್ದೇವೆ ಎಂದು ಬಾಂಬ್ ಸಿಡಿಸಿದ್ರು.

https://www.youtube.com/watch?v=dyv4N8U_T7k

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *