ಬೆಂಗಳೂರು: ಆಪರೇಷನ್ ಕಮಲದ ಸುಳಿವು ಸಿಗುತ್ತಿದ್ದಂತೆ ಕಾಂಗ್ರೆಸ್ ಹಿರಿಯ ಮುಖಂಡರು ದಿಢೀರ್ ಆಗಿ ಉಪಹಾರ ಕೂಟವನ್ನು ಆಯೋಜಿಸಿ ಮಂತ್ರಿಗಳ ಸಭೆ ನಡೆಸಿದ್ದಾರೆ.
ಅಶೋಕ ಹೋಟೆಲ್ ನಲ್ಲಿ ಉಪಹಾರ ಕೂಟದ ನೆಪದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಬಳಿಕ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಸಿಕ್ಕಿದರು. ಸಭೆಯಲ್ಲಿ ಏನು ಚರ್ಚೆ ನಡೆದಿದೆ ಎಂದು ಕೇಳಿದ್ದಕ್ಕೆ, ಇವತ್ತಿನ ಸಭೆಯಲ್ಲಿ ಸಮ್ಮಿಶ್ರ ಸರ್ಕಾರದ ಬಜೆಟ್ ಮತ್ತು ಸಾಮಾನ್ಯ ಕನಿಷ್ಟ ಕಾರ್ಯಕ್ರಮದ ಬಗ್ಗೆ ಮಾತ್ರ ಚರ್ಚೆ ನಡೆಸಿದ್ದೇವೆ ಹೊರತು ಬೇರೆ ಏನು ಚರ್ಚೆ ನಡೆಸಿಲ್ಲ ಇಂಗ್ಲಿಷಿನಲ್ಲಿ ಉತ್ತರ ನೀಡಿದರು. ಇದನ್ನೂ ಓದಿ: ಆಪರೇಷನ್ ಕಮಲ ಆಗ್ತೀರೋದು ಸತ್ಯ: ಸಿಎಂ

ಈ ಉತ್ತರ ಬಂದ ಕೂಡಲೇ ಕೆಲ ಶಾಸಕರು ಹೊರ ರಾಜ್ಯಕ್ಕೆ ತೆರಳಿದ್ದಾರೆ ಅಲ್ಲವೇ ಎಂದು ಕೇಳಿದ್ದಕ್ಕೆ, ಯಾರು ಎಲ್ಲೂ ಹೋಗಿಲ್ಲ. ಎಲ್ಲ ಶಾಸಕರು ನಮ್ಮ ಜೊತೆಗೆ ಇದ್ದಾರೆ ಎಂದು ಹೇಳುತ್ತಾ ಕಾರನ್ನು ಹತ್ತಿ ತೆರಳಿದರು.
ಸಾಧಾರಣವಾಗಿ ಮಾಧ್ಯಮಗಳ ಪ್ರಶ್ನೆಗೆ ಸಮಾಧಾನದಿಂದ ನಗುಮುಖದಿಂದ ಉತ್ತರಿಸುವ ಡಿಕೆ ಶಿವಕುಮಾರ್ ಅವರು ಸಭೆಯ ಬಳಿಕ ಬಹಳ ಗಂಭೀರವಾಗಿ ಇದ್ದಂತೆ ಕಂಡು ಬಂದಿತ್ತು. ಅಷ್ಟೇ ಅಲ್ಲದೇ ಚುಟುಕಾಗಿ ಕೇವಲ 20 ಸೆಕೆಂಡ್ ಗಳಲ್ಲಿ ಪ್ರತಿಕ್ರಿಯೆ ನೀಡಿ ತೆರಳಿದರು. ಇದನ್ನೂ ಓದಿ: ಉಪಹಾರ ಕೂಟದ ನೆಪದಲ್ಲಿ ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಪ್ರತಿತಂತ್ರ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply