ಅಣ್ಣನನ್ನೇ ಮದ್ವೆಯಾದ ತಂಗಿ – ರೊಚ್ಚಿಗೆದ್ದ ಅಮ್ಮನಿಂದ ಚಾಕು ಇರಿತ

ಚಂಡೀಗಢ: ಸಹೋದರಿಯೊಬ್ಬಳು ಸಂಬಂಧದಲ್ಲಿ ಅಣ್ಣನಾದ ವ್ಯಕ್ತಿಯನ್ನು ಮದುವೆಯಾಗಿದ್ದು, ಇದರಿಂದ ರೊಚ್ಚಿಗೆದ್ದ ಯುವತಿಯ ತಾಯಿ ಕುಟುಂಬದವರ ಜೊತೆ ಸೇರಿ ಆಕ್ರೋಶಗೊಂಡು ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಹರ್ಯಾಣದ ಪಾಣಿಪಾತ್‍ನಲ್ಲಿ ನಡೆದಿದೆ.

ಅಮಂದೀಪ್ ಕೌರ್ ಹಲ್ಲೆಗೊಳಗಾದ ಯುವತಿ. ಈಕೆ ನಾನ್ಯೂಲ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಕುಟುಂಬದವರು ಹಲ್ಲೆ ಮಾಡಿದ ತಕ್ಷಣ ನೆರೆಹೊರೆಯವರು ಬಂದು ಆಕೆಯನ್ನು ಸಮೀಪದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಆಕೆಯ ಸ್ಥಿತಿ ತುಂಬಾ ಗಂಭೀರವಾಗಿದ್ದು, ಆಕೆಯನ್ನು ಚಂಡೀಗಢಕ್ಕೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.

ಏನಿದು ಪ್ರಕರಣ?
ಚಂಡೀಗಢದ ಧಾನಾಸ್ ಪ್ರದೇಶದ ನಿವಾಸಿ ಅಮಂದೀಪ್ ಕೌರ್ 2018ರ ಮಾರ್ಚ್ 21ರಂದು ಪಟಿಯಾಲಾ ನಿವಾಸಿ ಜಸ್ವಿಂದರ್ ಸಿಂಗ್‍ನನ್ನು ಮದುವೆಯಾಗಿದ್ದಳು. ಮದುವೆಯ ನಂತರ ಇಬ್ಬರು ನಾನ್ಯೂಲ ಗ್ರಾಮದಲ್ಲಿ ಒಟ್ಟಿಗೆ ಸಂತೋಷದಿಂದ ವಾಸಿಸುತ್ತಿದ್ದರು. ಪತಿ ಸಿಂಗ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಕುಟುಂಬದ ವಿರೋಧದ ನಡುವೆಯೂ ಅಮಂದೀಪ್ ಮತ್ತು ಜಸ್ವಿಂದರ್ ಇಬ್ಬರು ಮದುವೆಯಾಗಿದ್ದರು.

ಕೊಲೆಗೆ ಪ್ಲ್ಯಾನ್
ಜನವರಿ 9 ರಂದು ಸಂಜೆ ಕೌರ್ ಮನೆಯಲ್ಲಿ ಒಬ್ಬಳೇ ಇದ್ದಳು. ಈ ವೇಳೆ ಕೌರ್ ನ ತಾಯಿ ಪರಮಜಿತ್ ಕೌರ್, ಸಹೋದರ ಪ್ರದೀಪ್ ಸಿಂಗ್, ಜಸ್ಮನ್ಪ್ರೀತ್, ಸೋದರ ಸಂಬಂಧಿ ಕಮಲ್ಜೀತ್ ಸಿಂಗ್, ಅವರ ಸ್ನೇಹಿತ ಸುಖ್‍ದೀಪ್ ಸಿಂಗ್ ಮತ್ತು ಚಿಕ್ಕಪ್ಪ ಕಾಕಾ ಸಿಂಗ್ ಸೇರಿದಂತೆ ಕೆಲವು ಮಂದಿ ಮನೆಗೆ ಹೋಗಿದ್ದಾರೆ. ಆಗ ಏಕಾಏಕಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ತಾಯಿ ಹಿಂದಿನಿಂದ ಬಂದು ಕೌರ್ ನ ಕುತ್ತಿಗೆಯನ್ನು ಹಿಡಿದಿದ್ದು, ಇತ್ತ ಪ್ರದೀಪ್ ಸಿಂಗ್ ಮತ್ತು ಜಸ್ಮನ್ಪ್ರೀತ್ ಆಕೆಯ ಕೈ-ಕಾಲುಗಳನ್ನು ಹಿಡಿದಿದ್ದರು. ಬಳಿಕ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.

ಮದುವೆ ಆದಾಗಿನಿಂದಲೂ ಅಮಂದೀಪ್ ಕುಟುಂಬಸ್ಥರು ಬೆದರಿಕೆ ಹಾಕುತ್ತಿದ್ದರು. ಕುಟುಂಬದಿಂದ ದೂರ ಉಳಿದುಕೊಂಡಿದ್ದ ನಮ್ಮ ಸಂಸಾರ ಚೆನ್ನಾಗಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ಹಿಂದೆ ಅಮಂದೀಪ್ ಕುಟುಂಬಸ್ಥರು ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದರು ಎಂದು ಜಸ್ವಿಂದರ್ ಸಿಂಗ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *