ಕಲಬುರಗಿ ಪಾಲಿಕೆ ಮೇಲೆ ಮತ್ತೆ ಉರ್ದು ಫಲಕ..!

ಕಲಬುರಗಿ: ತೀವ್ರ ವಿರೋಧದ ಮಧ್ಯೆಯೂ ಸಹ ಕಲಬುರಗಿ ಮಹಾನಗರ ಪಾಲಿಕೆ ಮೇಲೆ ಉರ್ದು ನಾಮಫಲಕ ಹಾಕಲಾಗಿದೆ.

ಶುಕ್ರವಾರ ರಾತ್ರಿ ಪಾಲಿಕೆಯ ಕೆಲ ಮುಸ್ಲಿಂ ಸದಸ್ಯರು ಹಾಗು ಮೇಯರ್ ಪುತ್ರ ಗಣೇಶ ವಳಕೇರಿ ಈ ಉರ್ದು ನಾಮಫಲಕ ಹಾಕಿದ್ದು, ಈ ಮೂಲಕ ರಾಜ್ಯ ಸರ್ಕಾರದ ಆದೇಶಕ್ಕೆ ಬೆಲೆ ಕೊಡುತ್ತಿಲ್ಲ ಅನ್ನುವಂತಾಗಿದೆ. ಒಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಇಂಗ್ಲಿಷ್ ಕಲಿಕೆಗೆ ವಿರೋಧ ಮಾಡಿದ್ರೆ, ಇತ್ತ ಅವರದ್ದೇ ಪಕ್ಷದ ಪಾಲಿಕೆ ಸದಸ್ಯರು ವಿರೋಧದ ಮಧ್ಯೆ ಉರ್ದು ನಾಮಫಲಕ ಹಾಕಿಸಿದ್ದಾರೆ.

ಈ ಹಿಂದೆ ವಿಧಾನಸಭೆ ಚುನಾವಣೆ ಸಮಯದಲ್ಲಿ ಉರ್ದು ನಾಮಫಲಕ ಹಾಕಿದ್ದ ಹಿನ್ನೆಲೆಯಲ್ಲಿ ಹಲವು ಕನ್ನಡಪರ ಸಂಘಟನೆ ಹಾಗು ಸಾಮಾಜಿಕ ಜಾಲತಾಣದಲ್ಲಿ ತೀವ್ರ ವೀರೋಧ ವ್ಯಕ್ತವಾಗಿತ್ತು. ಹೀಗಾಗಿ ಆ ಬಳಿಕ ಉರ್ದು ನಾಮಫಕಲವನ್ನು ತೆಗೆಯಲಾಗಿತ್ತು. ಕನ್ನಡ ಹಾಗು ಇಂಗ್ಲಿಷ್ ನಾಮಫಲಕವನ್ನು ಹಾಕಿ ಕೈ ಬಿಡಲಾಗಿತ್ತು.

ಇದೀಗ ಮತ್ತೆ ಉರ್ದು ನಾಮಫಲಕ ಹಾಕುವ ಮೂಲಕ ಇಲ್ಲಿನ ಕೆಲ ಪಾಲಿಕೆ ಸದಸ್ಯರು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅವರದ್ದೇ ಪಕ್ಷದ ಮುಖಂಡರನ್ನು ಸೆಡ್ಡು ಹೊಡೆದಂತಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *