ಭಾರತ್ ಬಂದ್ ಎಫೆಕ್ಟ್ – ಕಾಫಿನಾಡಲ್ಲಿ KSRTC ಗೆ 31 ಲಕ್ಷ ರೂ. ನಷ್ಟ

ಚಿಕ್ಕಮಗಳೂರು: ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ನಿಂದ ಜನಸಾಮಾನ್ಯರಿಗೆ ತೊಂದರೆಯಾಗಿರುವ ಜೊತೆಗೆ ಕೆಎಸ್‌ಆರ್‌ಟಿಸಿಗೆ ಲಕ್ಷಾಂತರ ರೂಪಾಯಿ ಆದಾಯ ನಷ್ಟವಾಗಿದೆ.

ಕಾರ್ಮಿಕರ ಮುಷ್ಕರಕ್ಕೆ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಎರಡು ದಿನ ಬಂದ್‍ನಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಒಟ್ಟು ಆರು ಡಿಪೋಗಳಲ್ಲಿ 327 ಬಸ್‍ಗಳು ಬಂದ್ ನಿಯಮಿತವಾಗಿ ಸಂಚರಿಸಿಲ್ಲ. ಇದರಿಂದ ಒಟ್ಟು ಅಂದಾಜು 31 ಲಕ್ಷ ರೂ. ನಷ್ಟ ಸಂಭವಿಸಿದೆ.

ಮಂಗಳವಾರ ಹಾಗೂ ಬುಧವಾರ ಚಿಕ್ಕಮಗಳೂರಿನಲ್ಲಿ 70, ಅರಸೀಕೆರೆಯಲ್ಲಿ 64, ಸಖರಾಯಪಟ್ಟಣದಲ್ಲಿ 53, ಕಡೂರಿನಲ್ಲಿ 63, ಮೂಡಿಗೆರೆಯಲ್ಲಿ 56, ಬೇಲೂರಿನಲ್ಲಿ 21 ಒಟ್ಟು 327 ಬಸ್‍ಗಳು ರಸ್ತೆಗಿಳಿದಿಲ್ಲ. ಕಾರ್ಮಿಕರ ಮುಷ್ಕರದ ಬಿಸಿ ಕೇಂದ್ರ ಸರ್ಕಾರಕ್ಕೆ ತಟ್ಟಿತೋ ಇಲ್ಲವೋ ತಿಳಿದಿಲ್ಲ. ಆದರೆ ಕೆಎಸ್‌ಆರ್‌ಟಿಸಿ ಮಾತ್ರ ಜೋರಾಗಿಯೇ ಬಿಸಿ ಮುಟ್ಟಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *