ಹೊರಗಡೆ ಹೋಗಿ ಬರುತ್ತೇನೆಂದಿದ್ದ ಯುವಕ ಶವವಾಗಿ ಪತ್ತೆ – ಪ್ರೇಯಸಿಗೆ ಪದೇ ಪದೇ ಕರೆ ಮಾಡಿದ್ದೆ ತಪ್ಪಾಯ್ತೇ?

ಬೆಂಗಳೂರು: ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಯುವಕ ಬುಧವಾರ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ರಹೀಂ ಮೃತ ದುರ್ದೈವಿ. ರಹೀಂ ಬೆಂಗಳೂರು ಹೊರವಲಯ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಜಿ ಸೊಣ್ಣೇನಹಳ್ಳಿ ನಿವಾಸಿಯಾಗಿದ್ದು, ಕಳೆದ 7ರಂದು ಅಂದರೆ ಸೋಮವಾರ ಮನೆಯಿಂದ ಹೊರಗಡೆ ಹೋಗಿ ಬರುತ್ತೇನೆ ಎಂದು ತಾಯಿಗೆ ಹೇಳಿ ಹೋಗಿದ್ದಾನೆ. ಆದರೆ ಯುವಕ ಎರಡು ದಿನಗಳ ನಂತರ ಬೆಂಗಳೂರಿನ ಗ್ರಾಮಂತರ ಹೊಸಕೋಟೆ ಅಮಾನಿ ದೊಡ್ಡಕೆರೆ ದಡದ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಮೃತ ರಹೀಂ ಎರಡು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಕೆಲವು ದಿನಗಳ ಹಿಂದೆಯಷ್ಟೇ ಹುಡುಗಿಯ ಪೋಷಕರು ಹಾಗೂ ಸಂಬಂಧಿಕರಿಗೆ ಇವರಿಬ್ಬರ ಪ್ರೀತಿಯ ವಿಚಾರ ತಿಳಿದಿದೆ. ನಂತರ ಯುವತಿಯ ಮನೆಯವರು ನಮ್ಮ ಹುಡುಗಿಯನ್ನು ಭೇಟಿಯಾಗಬಾರದು, ಮಾತನಾಡಿಸಬಾದರೆಂದು ಬೆದರಿಕೆ ಹಾಕಿದ್ದರು ಎಂದು ತಿಳಿದು ಬಂದಿದೆ.

ಯುವತಿಗೆ ಅವರ ಪೋಷಕರು ಬೇರೊಬ್ಬ ಯುವಕನ ಜೊತೆ ವಿವಾಹ ನಿಶ್ಚಯ ಮಾಡಿದ್ದರು. ಇದರಿಂದ ರಹೀಂ ಸಾಕಷ್ಟು ಮನನೊಂದಿದ್ದನು. ಕೊನೆಗೆ ಯುವತಿಯನ್ನು ಬಿಟ್ಟಿರಲಾರದೇ ರಹೀಂ ಪದೇ ಪದೇ ಆಕೆಗೆ ಫೋನ್ ಮಾಡಿ ಭೇಟಿಯಾಗಲು ಪ್ರಯತ್ನಿಸುತ್ತಿದ್ದನು. ಇದರಿಂದ ಯುವತಿಯ ಸಂಬಂಧಿಕರೇ ನನ್ನ ಮಗನನ್ನು ಕೊಲೆ ಮಾಡಿಸಿದ್ದಾರೆ ಎಂದು ರಹೀಂ ಪೋಷಕರು ಆರೋಪ ಮಾಡಿದ್ದಾರೆ.

ಈ ಬಗ್ಗೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *