ಬೆಂಗಳೂರು: ದಿವಂಗತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರಿಗೆ ಇಂದು ನಗರದಲ್ಲಿ ನುಡಿ ನಮನ ಸಲ್ಲಿಸಲಾಯಿತು. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಕುಟುಂಬ ಸಮೇತರಾಗಿ ಬಂದು ಪುಷ್ಪ ನಮನ ಸಲ್ಲಿಸಿದರು.
ನಗರದ ವಿಜಯನಗರ ಬಂಟರ ಸಂಘದ ಆವರಣದಲ್ಲಿ ಡಾ. ಮಧುಕರ್ ಶೆಟ್ಟಿ ನುಡಿ ನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ನಿಷ್ಟಾವಂತ, ದಕ್ಷ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ನೀಡಲಾಯಿತು. ಇದು ಪೊಲೀಸ್ ವ್ಯವಸ್ಥೆಯ ದೌರ್ಭಾಗ್ಯ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಮಾತನಾಡಿ, ಮಧುಕರ್ ಶೆಟ್ಟಿ ಅವರು ಮಾಡಿದ ಒಳ್ಳೆಯ ಕೆಲಸ ಮುಂದೆಯೂ ಇರುತ್ತದೆ. ನಾನು ಮಾಡಿದ ಆಸ್ತಿ ಹೆಂಡತಿ ಮಕ್ಕಳು ಪಾಲು ಮಾಡುತ್ತಾರೆ. ಆದರೆ ಒಳ್ಳೆಯ ಕೆಲಸ ಮಾಡಿ ಜಗತ್ತು ಬಿಟ್ಟು ಹೋದರೆ, ಅದನ್ನು ಪಾಲು ಮಾಡಲು ಜಗಳ ಇರುವುದಿಲ್ಲ. ಅದನ್ನು ಸಮಾಜ ನಿರಂತರವಾಗಿ ನೆನಪಿಸಿಕೊಂಡು ಹೋಗುತ್ತದೆ. ಸಮಾಜಕ್ಕಾಗಿ ತ್ಯಾಗ ಮಾಡಿದವರನ್ನು ಸದಾ ನೆನಪಿಸುತ್ತದೆ. ಅದಕ್ಕೆ ನಮ್ಮ ಮಧುಕರ್ ಶೆಟ್ಟಿ ನಿದರ್ಶನರಾಗಿದ್ದಾರೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply