ಹುಬ್ಬಳ್ಳಿಯಲ್ಲಿ ನಟಸಾರ್ವಭೌಮನ ಆಡಿಯೋ ಲಾಂಚ್

– ಪುನೀತ್, ರಚಿತಾ ಸ್ಟೆಪ್‍ಗೆ ಪ್ರೇಕ್ಷಕರು ಫಿದಾ

ಹುಬ್ಬಳ್ಳಿ: ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಬಹುನಿರೀಕ್ಷಿತ ನಟ ಸಾರ್ವಭೌಮ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅನುಪಸ್ಥಿತಿಯಲ್ಲಿ, ನಟ ಪುನೀತ್ ರಾಜ್ ಕುಮಾರ್ ನೇತೃತ್ವದಲ್ಲಿ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಯಶಸ್ವಿಯಾಗಿ ನಡೆಯಿತು. ಯಶಸ್ವಿ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ನಾಲ್ಕನೇ ಸಿನಿಮಾ ಇದಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಆದ್ರೆ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಐಟಿ ಬಿಸಿ ತಟ್ಟಿದ್ದು, ನಟ ಪುನೀತ್ ರಾಜ್ ಕುಮಾರ್ ಕೂಡ ಗೈರಾಗುತ್ತಾರೆ ಎನ್ನಲಾಗುತ್ತಿತ್ತು. ಆದರೆ ಮನೆಯ ಮೇಲಿನ ಐಟಿ ದಾಳಿ ಪೂರ್ಣಗೊಂಡಿದ್ದರಿಂದ ಮಧ್ಯಾಹ್ನವೇ ನಗರಕ್ಕೆ ಆಗಮಿಸಿದ ಪುನೀತ್ ರಾಜ್ ಕುಮಾರ್ ಅನುಮಾನಕ್ಕೆ ತೆರೆ ಎಳೆದರು.

ನೆಹರೂ ಮೈದಾನದಲ್ಲಿ ಕಿಕ್ಕಿರದ ಜನಸ್ತೋಮದ ಮಧ್ಯೆ ಬಹುಕೋಟಿ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಯಶಸ್ವಿಯಾಗಿ ನಡೆಯಿತು. ನಟ ಪುನೀತ್ ರಾಜ್ ಕುಮಾರ್, ನಟಿ ರಚಿತಾರಾಮ್ ಸ್ಟೇಪ್ ಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.

ಐಟಿ ದಾಳಿ ಬಳಿಕ ನಟ ಪುನೀತ್ ಮನೆಯಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳ ಜೊತೆ ಕೆಲವು ಕ್ಷಣ ಮಾತನಾಡಿದ್ದು, ಅಧಿಕಾರಿಗಳು ಬಂದು ಅವರ ಕೆಲಸ ಏನು ಅದನ್ನು ಮಾಡಿದ್ದಾರೆ. ಅವರಿಗೆ ನಾವು ಸಹಕರಿಸಿದ್ದೇವೆ. ಐಟಿ ಅಧಿಕಾರಿಗಳು ತುಂಬಾ ಪ್ರೊಫೆಶನಲ್ ಆಗಿ ಕೆಲಸ ಮಾಡಿದ್ದಾರೆ. ಏನು ತೊಂದರೆ ಆಗಿಲ್ಲ ಎಂದು ಕಾರು ಹತ್ತಿ ಹೊರಟ್ಟಿದ್ದರು. ಕಾರ್ ಹತ್ತಿದ ತಕ್ಷಣ ಪುನೀತ್ ಫೇಸ್‍ಬುಕ್‍ನಲ್ಲಿ ಲೈವ್ ಬಂದು, ಎಲ್ಲರಿಗೂ ನಮಸ್ಕಾರ, ಇಂದು ಸಂಜೆ ನಮ್ಮ ಸಿನಿಮಾ `ನಟಸಾರ್ವಭೌಮ’ ಆಡಿಯೋ ರಿಲೀಸ್ ಹುಬ್ಬಳ್ಳಿಯಲ್ಲಿ ಆಗುತ್ತಿದೆ. ಆದ್ದರಿಂದ ನಾವೆಲ್ಲ ಬರುತ್ತಿದ್ದೇವೆ. ನಿಮ್ಮನ್ನು ಅಲ್ಲಿಯೇ ಭೇಟಿ ಮಾಡುತ್ತೇವೆ. ಎಲ್ಲರೂ ಬನ್ನಿ ಕಾರ್ಯಕ್ರಮವನ್ನು ಎಂಜಾಯ್ ಮಾಡಿ” ಎಂದು ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *