ಕಾಫಿನಾಡಿನಲ್ಲಿ ಶ್ರೀಮುರಳಿ – ಮುಗಿಬಿದ್ದ ಅಭಿಮಾನಿಗಳು

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಲಬಾರ್ ಗೋಲ್ಡ್ ಅಂಡ್ ಜ್ಯುವೆಲ್ಲರಿ ಮಳಿಗೆ ಆರಂಭಗೊಂಡಿದೆ. ಅದರ ಉದ್ಘಾಟನೆಗಾಗಿ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಚಿಕ್ಕಮಗಳೂರಿಗೆ ಆಗಮಿಸಿದ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.

ಶೋರೂಂ ಉದ್ಘಾಟಿಸಿ ಮಾತನಾಡಿದ ಶ್ರೀಮುರುಳಿ, ನಾನು ಓಪನ್ ಮಾಡುತ್ತಿರುವ ಮಲಬಾರ್ ಗೋಲ್ಡ್ ಅಂಡ್ ಜ್ಯುವೆಲ್ಸ್ ನ ಮೂರನೇ ಶೋ ರೂಂ ಇದಾಗಿದ್ದು, ನಮಗೆ ಏನಾದರೂ ಒಡವೆ ಬೇಕೆಂದರೆ ನಾವು ಮಲಬಾರ್ ನಲ್ಲಿ ಖರೀದಿಸುತ್ತೇವೆ. ಸಾಕಷ್ಟು ವೆರೈಟಿ ಹಾಗೂ ವಿಭಿನ್ನವಾದ ಕಲೆಕ್ಷನ್ಸ್ ಇಲ್ಲಿ ಲಭ್ಯ ಎಂದಿದ್ದಾರೆ. ಆದರೆ ಚಿತ್ರನಟರ ಮನೆ ಮೇಲಾಗಿರುವ ಐಟಿ ದಾಳಿ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡದೇ ಎಲ್ಲರಿಗೂ ಒಳ್ಳೆದಾಗಲಿ ಎಂದು ಹೇಳಿದ್ದಾರೆ.

ಆಭರಣ ಶೋರೂಂ ಓಪನ್ ಮಾಡಲು ಬರುವಾಗ ಅವರು ಕಾರಿನ ಒಳಗೆ ಎದ್ದು ನಿಂತು ಅಭಿಮಾನಿಗಳಿಗೆ ಹಾಯ್ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳು ಅವರು ಫೋಟೋ ಕ್ಲಿಕ್ಕಿಸಿಲು ಹರಸಾಹಸ ಪಟ್ಟಿದ್ದಾರೆ. ಅಷ್ಟೇ ಅಲ್ಲದೇ ವೇದಿಕೆಯ ಮೇಲೆ ಹೋಗಿದ್ದ ಮುರಳಿ ಅವರು ಹಾಡಿಗೆ ಸ್ಟೆಪ್ ಕೂಡ ಹಾಕಿದ್ದಾರೆ. ಅಭಿಮಾನಿಗಳು ಸಹ ಅವರ ಜೊತೆ ಸೇರಿ ಡ್ಯಾನ್ಸ್ ಮಾಡಿದ್ದಾರೆ.

ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿಭಿನ್ನ ಡಿಸೈನ್, ವೆರೈಟಿಯ ಆಭರಣಗಳ ಮಾರಾಟಗಾರರಾದ, ವಿಶ್ವದ ಟಾಪ್ ಐದು ಆಭರಣಗಳ ಬ್ರ್ಯಾಂಡ್‍ಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ದೇಶಾದ್ಯಂತ 250ಕ್ಕೂ ಅಧಿಕ ಶೋರೂಂ ಹೊಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *