ಸುದೀಪ್ ಮನೆಯಲ್ಲಿ ಐಟಿ ರೇಡ್ ಅಂತ್ಯ- ಬೆಳಗ್ಗೆ ತೆರಳಿದ ಬಳಿಕ ಮತ್ತೆ ಅಧಿಕಾರಿಗಳು ಆಗಮಿಸಿದ್ದು ಯಾಕೆ?

ಬೆಂಗಳೂರು: ಕಿಚ್ಚ ಸುದೀಪ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಪರಿಶೀಲನೆ ಅಂತ್ಯಗೊಂಡಿದೆ.

ಐಟಿ ಅಧಿಕಾರಿಗಳು ಸತತ 47 ಗಂಟೆಯವರೆಗೆ ಸುದೀಪ್ ಮನೆಯಲ್ಲಿ ಪರಿಶೀಲನೆ ನಡೆಸಿ ಇಂದು ಬೆಳಗಿನ ಜಾವ 5.30ಕ್ಕೆ ತೆರಳಿದ್ದಾರೆ. ಸುದೀಪ್ ಮನೆಯಿಂದ ಕೆಲವು ದಾಖಲೆಗಳು, ಕಾಗದ ಪತ್ರಗಳನ್ನು ಅಧಿಕಾರಿಗಳು ತಮ್ಮ ಜೊತೆ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಐಟಿ ಅಧಿಕಾರಿಗಳ ಬಳಿ ಕಿಚ್ಚ ಸುದೀಪ್ ಮನವಿ

ಸುದೀಪ್ ಆದಾಯ ಮೂಲಗಳು, ಹೂಡಿಕೆಗಳು, ಬ್ಯಾಂಕ್ ವಹಿವಾಟು, ರಿಯಾಲಿಟಿ ಶೋಗಳ ಸಂಭಾವನೆ, ಚಿತ್ರಗಳ ಸಂಭಾವನೆ, ಚಿನ್ನಾಭರಣ ಸೇರಿ ಎಲ್ಲಾ ಆಯಾಮಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಬೆಳಗ್ಗೆ ತೆರಳಿದ್ದ ಅಧಿಕಾರಿಗಳು ಮತ್ತೆ ಸುದೀಪ್ ನಿವಾಸಕ್ಕೆ ಆಗಮಿಸಿದ್ದರು. ಕೆಲವು ದಾಖಲೆಗಳಿಗೆ ಸಹಿ ಮಿಸ್ ಆಗಿದ್ದ ಕಾರಣ ಅಧಿಕಾರಿಗಳು ಪುನಃ ಸುದೀಪ್ ಅವರ ಮನೆಗೆ ಭೇಟಿ ನೀಡಿ ಸಹಿಯನ್ನು ಪಡೆದುಕೊಂಡರು. ಇಬ್ಬರು ಐಟಿ ಅಧಿಕಾರಿಗಳು ಬ್ಯಾಗ್ ಹಿಡಿದ ಮನೆ ಒಳಗಡೆ ಹೋಗಿ ಸಹಿ ಪಡೆದು ಹತ್ತೇ ನಿಮಿಷದಲ್ಲಿ ವಾಪಸ್ ಮರಳಿದ್ದಾರೆ.

ರಾತ್ರಿಯಿಡೀ ನಡೆದ ಐಟಿ ಪರಿಶೀಲನೆಗಾಗಿ ಸುದೀಪ್ ಅವರು ಅಧಿಕಾರಿಗಳೊಂದಿಗೆ ನಿದ್ದೆ ಗೆಟ್ಟಿದ್ದರು. ರಾತ್ರಿಯಿಡಿ ಅಧಿಕಾರಿಗಳು ಕೇಳಿದ ಪ್ರತಿಯೊಂದು ಪ್ರಶ್ನೆಗಳಿಗೆ ಸುದೀಪ್ ಜೊತೆಯಲ್ಲೇ ಇದ್ದು ಉತ್ತರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *